ಸುಂದರ್ ಮೂರ್ತಿ ನಿಧನ

7

ಸುಂದರ್ ಮೂರ್ತಿ ನಿಧನ

Published:
Updated:
ಸುಂದರ್ ಮೂರ್ತಿ ನಿಧನ

ಬೆಂಗಳೂರು: ಕರ್ನಾಟಕದ ಹಿರಿಯ ಫುಟ್‌ಬಾಲ್‌ ಆಟಗಾರ ಸುಂದರ್ ಮೂರ್ತಿ (53) ಶನಿವಾರ ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ಇಲ್ಲಿನ ಇಂದಿರಾನಗರ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರಿಗೆ ಪತ್ನಿ , ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. 20 ವರ್ಷಗಳ ಕಾಲ ಅವರು ಬಿಎಸ್‌ಎನ್‌ಎಲ್ ತಂಡಕ್ಕಾಗಿ ಆಡಿದ್ದಾರೆ. 1987 ಮತ್ತು 1990ರ ಅವಧಿಯಲ್ಲಿ ನಡೆದ ಸಂತೋಷ್‌ ಟ್ರೋಫಿ ಪಂದ್ಯಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದಾರೆ.

1986ರಲ್ಲಿ ರಾಷ್ಟ್ರೀಯ ಸಬ್‌ಜೂನಿಯರ್ ತಂಡದಲ್ಲಿ ಹಾಗೂ 1987ರಲ್ಲಿ ರಾಷ್ಟ್ರೀಯ ಜೂನಿಯರ್ ತಂಡದ ಪರ ಕೂಡ ಆಡಿದ್ದಾರೆ. ರಾಷ್ಟ್ರೀಯ

ಕ್ರೀಡಾಕೂಟದಲ್ಲಿ ಅವರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.ಈ ಎಲ್ಲಾ ತಂಡಗಳಲ್ಲಿ ಅವರು ಗೋಲ್‌ಕೀಪರ್ ಆಗಿ ಆಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry