ಕಾಬೂಲ್‌ ಹೋಟೆಲ್ ದಾಳಿ: ನಾಲ್ವರು ಬಂದೂಕುದಾರಿಗಳ ಹತ್ಯೆ, 153 ಒತ್ತೆಯಾಳುಗಳ ಬಿಡುಗಡೆ

7

ಕಾಬೂಲ್‌ ಹೋಟೆಲ್ ದಾಳಿ: ನಾಲ್ವರು ಬಂದೂಕುದಾರಿಗಳ ಹತ್ಯೆ, 153 ಒತ್ತೆಯಾಳುಗಳ ಬಿಡುಗಡೆ

Published:
Updated:
ಕಾಬೂಲ್‌ ಹೋಟೆಲ್ ದಾಳಿ: ನಾಲ್ವರು ಬಂದೂಕುದಾರಿಗಳ ಹತ್ಯೆ, 153 ಒತ್ತೆಯಾಳುಗಳ ಬಿಡುಗಡೆ

ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಇಂಟರ್‌ಕಾಂಟಿನೆಂಟಲ್‌ ಹೋಟೆಲ್‌ನಲ್ಲಿ ನಡೆದ ಬಂದೂಕುದಾರಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಲ್ವರು ಬಂದೂಕುದಾರಿಗಳ ಹತ್ಯೆ ಮಾಡಿದ್ದು, 153 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.

ಹೋಟೆಲ್‌ನ ಅಡುಗೆ ಮನೆಯಿಂದ ಕಟ್ಟಡದ ಮುಖ್ಯಭಾಗ ತಲುಪಿರುವ ದಾಳಿಕೋರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಯು ದಾಳಿಕೋರರ ವಿರುದ್ಧ ಪ್ರತಿ ದಾಳಿ ನಡೆಸಿದ್ದು, ಹೋಟೆಲ್‌ ಸಿಬ್ಬಂದಿ ಹಾಗೂ ಅಲ್ಲಿ ತಂಗಿದ್ದವರು ಗಾಬರಿಗೊಂಡು ಹೊರ ಬರುವ ಪ್ರಯತ್ನ ಮಾಡಿದ್ದಾರೆ.

ದಾಳಿಯಲ್ಲಿ 5 ಜನರು ಮೃತಪಟ್ಟಿದ್ದು, 153 ಜನರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಅಫ್ಗಾನ್ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು ಬಂದೂಕುದಾರಿಗಳ ಹತ್ಯೆ ಮಾಡಿದ್ದು, 153 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.

ಹೋಟೆಲ್‌ನಲ್ಲಿ ತಂಗಿರುವ ಅನೇಕರು ಜೀವ ಉಳಿಸಿಕೊಳ್ಳಲು ಕೊಠಡಿಗಳಲ್ಲಿ ಅವಿತು ಕೊಂಡಿದ್ದರು ಎಂದು ಅಫ್ಗಾನ್ ಸರ್ಕಾರ ತಿಳಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.

ಉಗ್ರರ ತಂಡ ಕಾಬೂನ್‌ನ ಹೋಟೆಲ್‌ಗಳ ಮೇಲೆ ದಾಳಿ ನಡೆಸುವ ಸಂಭವ ಇರುವುದಾಗಿ ಅಲ್ಲಿನ ಅಮೆರಿಕ ರಾಯಭಾರ ಕಚೇರಿ ಅಮೆರಿಕ ಪ್ರಜೆಗಳಿಗೆ ಗುರುವಾರ ಎಚ್ಚರಿಕೆ ಸಂದೇಶ ರವಾನಿಸಿತ್ತು.

2011ರ ಜೂನ್‌ನಲ್ಲಿ ಇಂಟರ್‌ಕಾಂಟಿನೆಂಟಲ್‌ ಮೇಲೆ ತಾಲಿಬಾನ್‌ ಆತ್ಮಾಹುತಿ ದಾಳಿ ನಡೆದು 21 ಜನರು ಬಲಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry