ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಎನ್‌ಎಬಿಎಚ್‌ ಗೌರವ

7

ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಎನ್‌ಎಬಿಎಚ್‌ ಗೌರವ

Published:
Updated:

ಮಂಗಳೂರು: ನಗರದ ಕೊಡಿಯಾಲ್‍ಬೈಲಿನಲ್ಲಿರುವ ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ಇದೇ 8ರಿಂದ ‘ರಾಷ್ಟ್ರೀಯ ಮಾನ್ಯತಾ ಮಂಡಳಿ ಆಸ್ಪತ್ರೆ’ (ಎನ್‌ಎಬಿಎಚ್‌) ಎಂಬ ಮಾನ್ಯತೆ ದೊರತಿದೆ.

ರೋಗಿಯ ಆರೈಕೆ, ಔಷಧಿ ನಿರ್ವಹಣೆ, ರೋಗಿಯ ಸುರಕ್ಷತೆ, ವೈದ್ಯಕೀಯ ಫಲಿತಾಂಶಗಳು, ವೈದ್ಯಕೀಯ ದಾಖಲೆಗಳು, ಸೋಂಕು ನಿಯಂತ್ರಣ ಮತ್ತು ಸಿಬ್ಬಂದಿ ನಡವಳಿಕೆ ಸಹಿತ ಹಲವು ವಿಚಾರಗಳಲ್ಲಿ ಯೇನೆಪೋಯ ಆಸ್ಪತ್ರೆಯ ಉತ್ತಮ ಗುಣಮಟ್ಟವನ್ನು ಗಮನಿಸಿ ಈ ಮಾನ್ಯತೆ ನೀಡಲಾಗಿದೆ. ದೇಶಾದ್ಯಂತ 1200ಕ್ಕೂ ಮಿಕ್ಕಿ ಅರ್ಜಿದಾರರಲ್ಲಿ ಕೇವಲ 491 ಆಸ್ಪತ್ರೆಗಳಿಗೆ ಮಾತ್ರ ಈ ಮಾನ್ಯತೆ ದೊರಕಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry