ನಿಂಬೆಸಿಪ್ಪೆಯಲ್ಲಿ ಆರೋಗ್ಯದ ಗುಟ್ಟು

7

ನಿಂಬೆಸಿಪ್ಪೆಯಲ್ಲಿ ಆರೋಗ್ಯದ ಗುಟ್ಟು

Published:
Updated:
ನಿಂಬೆಸಿಪ್ಪೆಯಲ್ಲಿ ಆರೋಗ್ಯದ ಗುಟ್ಟು

ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ವಿಟಮಿನ್‌, ಖನಿಜಾಂಶಗಳು, ಪೊಟ್ಯಾಶಿಯಂ, ಕ್ಯಾಲ್ಶಿಯಂನಂಥ ಫೈಬರ್‌ಗಳು ಇದರಲ್ಲಿ ಹೇರಳವಾಗಿರುತ್ತವೆ

* ಮೂಳೆಯ ಆರೋಗ್ಯ ವೃದ್ಧಿಸುತ್ತದೆ: ಇದರಲ್ಲಿ ಕಾಲ್ಶಿಯಂ ಹಾಗೂ ವಿಟಮಿನ್‌ ಸಿ ಅಂಶ ಹೇರಳವಾಗಿರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಅಸ್ಥಿರಂಧ್ರತೆ (ಆಸ್ಟಿಯೊಪರೋಸಿಸ್‌), ಸಂಧಿವಾತ, ಉರಿಯೂತದಂಥ ಮೂಳೆಗೆ ಸಂಬಂಧಿಸಿದ ತೊಂದರೆಗಳನ್ನು ನಿಯಂತ್ರಿಸುವಲ್ಲಿಯೂ ಇದು ಸಹಕಾರಿ.

* ಒತ್ತಡವನ್ನು ನಿವಾರಿಸುತ್ತದೆ: ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸಿಟ್ರಸ್‌ ಅಂಶ ಹೆಚ್ಚಿದ್ದು ಒತ್ತಡ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

* ಕ್ಯಾನ್ಸರ್‌ನೊಂದಿಗೆ ಹೋರಾಡುತ್ತದೆ: ಸಿಪ್ಪೆಯಲ್ಲಿರುವ ಸೆಲ್ವೆಸ್ಟ್ರಾಲ್‌ ಕ್ಯು40 ಹಾಗೂ ಲಿಮೊನಿನ್‌ ಅಂಶವು ದೇಹದಲ್ಲಿರುವ ಕ್ಯಾನ್ಸರ್‌ಕಾರಕ ಕೋಶಗಳನ್ನು ನಾಶ ಮಾಡುತ್ತವೆ. ಕ್ಯಾನ್ಸರ್‌ ಚಿಕಿತ್ಸೆ ಸಂದರ್ಭದಲ್ಲಿಯೂ ನಿಂಬೆಹಣ್ಣಿನ ಸಿಪ್ಪೆಯ ಬಳಕೆ ಮಾಡಲಾಗುತ್ತದೆ. ಕೀಮೊಥೆರಪಿಯಲ್ಲಿ ಬಳಸಲಾಗುವ ಎಡ್ರಿಯಾಮೈಸಿನ್‌ಗಿಂತ ನಿಂಬೆಕಾಯಿ ಸಿಪ್ಪೆಯಲ್ಲಿ ಸಾವಿರ ಪಟ್ಟು ಹೆಚ್ಚು ಶಕ್ತಿ ಇದೆ ಎಂದು ಸಂಶೋಧನೆ ಇದೆ.

* ವಿಷಕಾರಿ ಅಂಶವನ್ನು ತೆಗೆದುಹಾಕುತ್ತದೆ: ಸಿಟ್ರಸ್‌ ಬಯೊಫ್ಲೇವನಾಯ್ಡ್‌ ಅಂಶ ನಿಂಬೆ ಸಿಪ್ಪೆಯಲ್ಲಿ ಹೇರಳವಾಗಿದ್ದು, ಅವು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತವೆ.

* ಕೊಬ್ಬು ಕಡಿಮೆ ಮಾಡುತ್ತದೆ: ಇದರಲ್ಲಿರುವ ಪಾಲಿಫೀನಲ್‌ ಫ್ಲೇವನಾಯ್ಡ್‌ ಅಂಶವು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಿ ಹೃದಯದ ಆರೋಗ್ಯವನ್ನು ನಿಯಂತ್ರಿಸುತ್ತದೆ. ದೇಹದ ತೂಕ ಕಳೆದುಕೊಳ್ಳಲೂ ಇವುಗಳು ಸಹಕಾರಿ.

* ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿಯಂತ್ರಿಸುತ್ತವೆ: ರಕ್ತದೊತ್ತಡವನ್ನು ನಿಯಂತ್ರಿಸಲು ನಿಂಬೆಹಣ್ಣಿನ ಸಿಪ್ಪೆಯಲ್ಲಿರುವ ಪೊಟ್ಯಾಷಿಯಂ ಅಂಶ ಸಹಾಯ ಮಾಡುತ್ತದೆ. ಹೃದಯ ಸಂಬಂಧಿ ರೋಗಗಳು, ಹೃದಯ ಸ್ಥಂಬನ, ಮಧುಮೇಹದಂಥ ಸಮಸ್ಯೆಯನ್ನೂ ನಿಯಂತ್ರಿಸುವ ಶಕ್ತಿ ಇದಕ್ಕಿದೆ.

* ಹಲ್ಲಿನ ಆರೋಗ್ಯ ಕಾಪಾಡುತ್ತದೆ: ದೇಹದಲ್ಲಿ ವಿಟಮಿನ್‌ ಸಿ ಕೊರತೆ ಇದ್ದಲ್ಲಿ ಹಲ್ಲಿನ ಸಮಸ್ಯೆ, ದಂತದಲ್ಲಿ ರಕ್ತಸ್ರಾವದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಂಬೆಹಣ್ಣಿನ ನಿರಂತರ ಬಳಕೆಯಿಂದ ಅದರಲ್ಲಿರುವ ಸಿಟ್ರಸ್‌ ಅಂಶ ಹಲ್ಲು ಹಾಗೂ ದಂತದ ಆರೋಗ್ಯವನ್ನು ಕಾಪಾಡುತ್ತದೆ.

* ತ್ವಚೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ: ತ್ವಚೆಯ ಮೇಲಿನ ನೆರಿಗೆ, ಮೊಡವೆ, ಕಪ್ಪು ಕಲೆಯಂಥ ಸಮಸ್ಯೆ ಆಗದಂತೆ ನಿಯಂತ್ರಿಸುತ್ತದೆ. ನಿಂಬೆಕಾಯಿ ಆ್ಯಂಟಿ ಆಕ್ಸಿಡೆಂಟ್‌ನಂತೆಯೂ ಕೆಲಸ ಮಾಡುವುದರಿಂದ ವಿಷಕಾರಿ ಅಂಶಗಳನ್ನು ತೆಗೆದು ಚರ್ಮ ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ.

* ಬಗೆಬಗೆ ಉಪಯೋಗ: ಯಕೃತ್‌ನ ಶುದ್ಧಿ, ಕಿವಿಗೆ ಸಂಬಂಧಿಸಿದ ಸೋಂಕು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಚೆನ್ನಾಗಿ ಆಗುವಂತೆ ಮಾಡುತ್ತದೆ. ಪಾರ್ಶ್ವವಾಯು ಸಮಸ್ಯೆಯನ್ನೂ ನಿಯಂತ್ರಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry