ಗಡಿಯಲ್ಲಿ ಪಾಕ್‌ ದಾಳಿ: ಮತ್ತೊಬ್ಬ ಯೋಧನ ಸಾವು

7

ಗಡಿಯಲ್ಲಿ ಪಾಕ್‌ ದಾಳಿ: ಮತ್ತೊಬ್ಬ ಯೋಧನ ಸಾವು

Published:
Updated:

ಜಮ್ಮು: ಮತ್ತೆ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಶನಿವಾರ ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಯೋಧರೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಗುರುವಾರದಿಂದ ಈಚೆಗೆ ದಾಳಿಯಲ್ಲಿ ಮೃತಪಟ್ಟ ಭಾರತದ ಯೋಧರ ಸಂಖ್ಯೆ 11ಕ್ಕೆ ಏರಿದೆ.

ಪೂಂಚ್‌ ಜಿಲ್ಲೆಯ ಮಾನ್‌ಕೋಟ್‌ ವಲಯದಲ್ಲಿ ಪಾಕಿಸ್ತಾನ ಯೋಧರು ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಸಿ.ಕೆ.ರಾಯ್‌ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯೋಧ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದುವರೆಗೆ ಸತ್ತವರಲ್ಲಿ ಆರು ಮಂದಿ ನಾಗರಿಕರು, ಮೂವರು ಸೇನಾ ಸಿಬ್ಬಂದಿ ಹಾಗೂ ಇಬ್ಬರು ಗಡಿ ಭದ್ರತಾಪಡೆ ಯೋಧರು ಸೇರಿದ್ದು 16 ಮಂದಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry