ರಾಜಕೀಯ ನಡೆ ಇಂದು ಪ್ರಕಟ: ಪವನ್ ಕಲ್ಯಾಣ್

7

ರಾಜಕೀಯ ನಡೆ ಇಂದು ಪ್ರಕಟ: ಪವನ್ ಕಲ್ಯಾಣ್

Published:
Updated:
ರಾಜಕೀಯ ನಡೆ ಇಂದು ಪ್ರಕಟ: ಪವನ್ ಕಲ್ಯಾಣ್

ಹೈದರಾಬಾದ್: ಜನ ಸೇನಾ ಪಕ್ಷ ಸ್ಥಾಪಿಸಿರುವ ತೆಲುಗು ನಟ ಪವನ್ ಕಲ್ಯಾಣ್, ಸೋಮವಾರ ತಮ್ಮ ಮುಂದಿನ ರಾಜಕೀಯ ಯೋಜನೆಯನ್ನು ತಿಳಿಸುವುದಾಗಿ ಹೇಳಿದ್ದಾರೆ.

‘ಸೋಮವಾರ ಕರೀಂನಗರ ಸಮೀಪದ ಕೊಂಡಗಟ್ಟುವಿನ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತೇನೆ. ನಂತರ ನನ್ನ ಕಾರ್ಯಕ್ರಮಗಳ ಕುರಿತು ತಿಳಿಸುತ್ತೇನೆ. ಜನರನ್ನು ತಲುಪಲು ಪಾದಯಾತ್ರೆ, ಸಮಾವೇಶ ಅಥವಾ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆ ಎಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ’ ಎಂದಿದ್ದಾರೆ.

ತೆಲಂಗಾಣದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುವುದು ನನ್ನ ಮುಖ್ಯ ಉದ್ದೇಶ. ನನ್ನ ಮುಂದಿನ ನಡೆ ಕಾರ್ಯಕರ್ತರ ಅಭಿಪ್ರಾಯವನ್ನು ಅವಲಂಬಿಸಿದೆ ಎಂದಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ನಾಗೇಶ್ವರ್, ‘ಪವನ್ ಕಲ್ಯಾಣ್‌ಗೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗೆ ಅವಕಾಶ ಇಲ್ಲ. ಆಂಧ್ರ ಪ್ರದೇಶದವರಾಗಿರುವುದರಿಂದ ತೆಲಂಗಾಣ ಜನತೆ ಅವರನ್ನು ರಾಜಕೀಯವಾಗಿ ಸ್ವೀಕರಿಸುವುದಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry