ಇ–ಗ್ರಂಥಾಲಯ ಸ್ಥಾಪನೆಗೆ ₹1 ಕೋಟಿ ಅನುದಾನ: ಅನಂತಕುಮಾರ್‌

7

ಇ–ಗ್ರಂಥಾಲಯ ಸ್ಥಾಪನೆಗೆ ₹1 ಕೋಟಿ ಅನುದಾನ: ಅನಂತಕುಮಾರ್‌

Published:
Updated:
ಇ–ಗ್ರಂಥಾಲಯ ಸ್ಥಾಪನೆಗೆ ₹1 ಕೋಟಿ ಅನುದಾನ: ಅನಂತಕುಮಾರ್‌

ಬೆಂಗಳೂರು: ನಗರ ಕೇಂದ್ರ ಗ್ರಂಥಾಲಯ ಹಾಗೂ ಬಿಬಿಎಂಪಿ ವತಿಯಿಂದ ಎನ್.ಆರ್. ಕಾಲೊನಿಯಲ್ಲಿ ಸ್ಥಾಪಿಸಿರುವ ಇ–ಗ್ರಂಥಾಲಯವನ್ನು ಕೇಂದ್ರ ಸಚಿವ ಅನಂತಕುಮಾರ್‌ ಭಾನುವಾರ ಉದ್ಘಾಟಿಸಿದರು.

‘ಎಲ್ಲ ವಾರ್ಡ್‌ಗಳಲ್ಲಿ ಇ–ಗ್ರಂಥಾಲಯ ಸ್ಥಾಪನೆ ಮಾಡಲು ಸಂಸದರ ನಿಧಿಯಿಂದ ₹1 ಕೋಟಿ ಅನುದಾನ ನೀಡುತ್ತೇನೆ. ಇ–ಗ್ರಂಥಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೂ ಪತ್ರ ಬರೆಯುತ್ತೇನೆ’ ಎಂದು ಅನಂತಕುಮಾರ್‌ ತಿಳಿಸಿದರು.

‘ಪಾಲಿಕೆಯು ಸಂಗ್ರಹಿಸಿರುವ ಸುಮಾರು ₹300 ಕೋಟಿ ಗ್ರಂಥಾಲಯ ಕರವನ್ನು ಕೂಡಲೇ ಗ್ರಂಥಾಲಯ ಇಲಾಖೆಗೆ ನೀಡುವಂತೆ ಆಯುಕ್ತರಿಗೆ ಸೂಚಿಸುತ್ತೇನೆ. ಇದರಿಂದ ಮತ್ತಷ್ಟು ಗ್ರಂಥಾಲಯಗಳನ್ನು ಸ್ಥಾಪಿಸಲು ಸಹಕಾರಿಯಾಗುತ್ತದೆ’ ಎಂದರು.

ಮೇಯರ್‌ ಆರ್‌.ಸಂಪತ್‍ ರಾಜ್, ‘ಎಲ್ಲ ವಾರ್ಡ್‌ಗಳಲ್ಲಿ ಇ–ಗ್ರಂಥಾಲಯ ಸ್ಥಾಪಿಸುವ ಯೋಜನೆಯನ್ನು ಮುಂದಿನ ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry