ವಿಶ್ವ ಆರ್ಥಿಕ ವೇದಿಕೆ: ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ ಸಾಲಿನಲ್ಲಿ ಭಾರತಕ್ಕೆ 62ನೇ ಸ್ಥಾನ

7

ವಿಶ್ವ ಆರ್ಥಿಕ ವೇದಿಕೆ: ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ ಸಾಲಿನಲ್ಲಿ ಭಾರತಕ್ಕೆ 62ನೇ ಸ್ಥಾನ

Published:
Updated:
ವಿಶ್ವ ಆರ್ಥಿಕ ವೇದಿಕೆ: ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ ಸಾಲಿನಲ್ಲಿ ಭಾರತಕ್ಕೆ 62ನೇ ಸ್ಥಾನ

ದಾವೋಸ್‌: ಸಮಗ್ರ ಅಭಿವೃದ್ಧಿ ಸೂಚ್ಯಂಕದ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯಲ್ಲಿ ಭಾರತ 62ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 60ನೇ ಸ್ಥಾನದಲ್ಲಿತ್ತು.

ವಿಶ್ವ ಆರ್ಥಿಕ ವೇದಿಕೆ(ಡಬ್ಲ್ಯುಇಎಫ್‌) ವಾರ್ಷಿಕ ಸಮಾವೇಶಕ್ಕೂ ಮುನ್ನ  ಸೋಮವಾರ ವಾರ್ಷಿಕ ಸೂಚ್ಯಂಕ ಬಿಡುಗಡೆಯಾಗಿದೆ. ಲಿಥುಯೇನಿಯಾ  ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯಲ್ಲಿ ಮತ್ತೆ ಮೊದಲ ಸ್ಥಾನದಲ್ಲಿದೆ. ಮುಂದುವರಿದ ಆರ್ಥಿಕತೆಯ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನದಲ್ಲಿ ಮುಂದುವರಿದಿದೆ.

ಒಟ್ಟು 103 ರಾಷ್ಟ್ರಗಳ ಆರ್ಥಿಕತೆಯನ್ನು ಮುಂದುವರಿದ ಆರ್ಥಿಕತೆ(29) ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆ(74) ಎಂದು ವರ್ಗೀಕರಿಸಲಾಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಯಲ್ಲಿ ಭಾರತ ಈ ಬಾರಿ 62ನೇ ಸ್ಥಾನ ಪಡೆದಿದ್ದು, ನೆರೆಯ ರಾಷ್ಟ್ರಗಳಾದ ಚೀನಾ 26 ಹಾಗೂ ಪಾಕಿಸ್ತಾನ 47ನೇ ಸ್ಥಾನದಲ್ಲಿದೆ.

ಜೀವನದ ಗುಣಮಟ್ಟ, ಪರಿಸರ ಹಾಗೂ ಮುಂದಿನ ಜನಾಂಗದ ರಕ್ಷಣೆ ಸೇರಿ ಇತರ ವಿಷಯಗಳನ್ನು ಪರಿಗಣಿಸಿ ಸೂಚ್ಯಂಕ ಸಿದ್ಧಪಡಿಸಲಾಗಿದೆ ಎಂದು ಡಬ್ಲ್ಯುಇಎಫ್‌ ಹೇಳಿದೆ.

ಸೂಚ್ಯಂಕದಲ್ಲಿ ಬ್ರಿಕ್ಸ್‌ ರಾಷ್ಟ್ರಗಳು:

 

ರಷ್ಯಾ ಒಕ್ಕೂಟ– 19
ಚೀನಾ–26
ಬ್ರೆಜಿಲ್‌–37
ಭಾರತ–62
ದಕ್ಷಿಣ ಆಫ್ರಿಕಾ–69

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry