3

ಪಕ್ಷ ವಿರೋಧಿ ಚಟುವಟಿಕೆ: ಅರುಣಾಚಲ ಪ್ರದೇಶ ಬಿಜೆಪಿಯಿಂದ ಇಬ್ಬರು ಶಾಸಕರಿಗೆ ನೋಟಿಸ್‌

Published:
Updated:
ಪಕ್ಷ ವಿರೋಧಿ ಚಟುವಟಿಕೆ: ಅರುಣಾಚಲ ಪ್ರದೇಶ ಬಿಜೆಪಿಯಿಂದ ಇಬ್ಬರು ಶಾಸಕರಿಗೆ ನೋಟಿಸ್‌

ಇಟಾನಗರ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಇಬ್ಬರು ಶಾಸಕರಿಗೆ ಅರುಣಾಚಲ ಪ್ರದೇಶ ರಾಜ್ಯ ಬಿಜೆಪಿ ಘಟಕ ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಕೊಲಾರಿಯಾಂಗ್‌ ಹಾಗೂ ದುಂಪಾರಿಜೋ ಕ್ಷೇತ್ರಗಳ ಶಾಸಕರಾದ ಪಣಿ ತರಮ್‌ ಹಾಗೂ ಪಂಗಾ ಬಾಗೆ ಅವರಿಗೆ ಬಿಜೆಪಿ ನೋಟಿಸ್‌ ನೀಡಿದ್ದು, ಏಕೆ ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬದನ್ನು ಒಂದು ವಾರದೊಳಗಾಗಿ ವಿವರಿಸಬೇಕು. ಪ್ರತಿಕ್ರಿಯೆಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೂ ಮೊದಲು ಮುಖ್ಯಮಂತ್ರಿ ಪೆಮಾ ಖಂಡು ಅವರು ಕಳೆದ ಡಿಸೆಂಬರ್‌ 27ರಂದು ಸರ್ಕಾರದ ಗೃಹ ಮತ್ತು ಶಿಕ್ಷಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಸ್ಥಾನದಿಂದ ತರಮ್‌ ಅವರನ್ನು ವಜಾ ಮಾಡಿದ್ದರು. ಬಾಗೆ ಅವರು ಬಿಜೆಪಿಯ ಸಹಾಯಕ ಸದಸ್ಯರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry