ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

7

ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

Published:
Updated:

ಸಿದ್ದಾಪುರ (ಕೊಡಗು ಜಿಲ್ಲೆ): ಸಮೀಪದ ಕರಡಿಗೋಡು ಗ್ರಾಮದಲ್ಲಿ ಸೋಮವಾರ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿಯಾಗಿದ್ದಾರೆ.

ಗ್ರಾಮದ ಮೋಹನ್ ದಾಸ್‌ (65) ಮೃತಪಟ್ಟವರು. ಕಾಫಿ ಕೊಯ್ಲು ಮಾಡಲು ಕಾರ್ಮಿಕರನ್ನು ಬಿಟ್ಟು ವಾಪಸ್‌ ಬರುವಾಗ ಕಾಡಾನೆ ತುಳಿದು ಸಾಯಿಸಿದೆ.

ಈ ಭಾಗದಲ್ಲಿ ಆನೆ ಹಾವಳಿ ನಿರಂತರವಾಗಿದ್ದರೂ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಸಿದ್ದಾಪುರ ಪಟ್ಟಣದಲ್ಲಿ ಒಂದು ಗಂಟೆ ಬಂದ್‌ ನಡೆಸಿದರು. ತೋಟಗಳಿಗೆ ಕಾಡಾನೆಗಳು ಬಂದಿರುವ ಮಾಹಿತಿಯಿದ್ದರೂ ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry