‘ಪದ್ಮಾವತ್‌’ ಚಿತ್ರಕ್ಕೆ ತಡೆ ಕೋರಿ ಅರ್ಜಿ: ಇಂದು ವಿಚಾರಣೆ

7

‘ಪದ್ಮಾವತ್‌’ ಚಿತ್ರಕ್ಕೆ ತಡೆ ಕೋರಿ ಅರ್ಜಿ: ಇಂದು ವಿಚಾರಣೆ

Published:
Updated:
‘ಪದ್ಮಾವತ್‌’ ಚಿತ್ರಕ್ಕೆ ತಡೆ ಕೋರಿ ಅರ್ಜಿ: ಇಂದು ವಿಚಾರಣೆ

ನವದೆಹಲಿ: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್‌’ ಚಿತ್ರ ಬಿಡುಗಡೆಗೆ ಇದೇ 25ರಂದು ನೀಡಿದ್ದ ಆದೇಶ ವಾಪಸ್‌ ಪಡೆಯುವಂತೆ ಕೋರಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸೋಮವಾರ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿವೆ.

ಮಂಗಳವಾರ ಈ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ಹೇಳಿದೆ.

‘ಸಿನಿಮಾಟೊಗ್ರಾಫ್‌ ಕಾಯ್ದೆ’ಯ ಸೆಕ್ಷನ್‌ 6ರ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗುವ ಸಾಧ್ಯತೆ ಇದ್ದಲ್ಲಿ ಯಾವುದೇ ವಿವಾದಾತ್ಮಕ ಚಲನಚಿತ್ರದ ಪ್ರದರ್ಶನಕ್ಕೆ ತಡೆ ನೀಡುವ ಅಧಿಕಾರ ಇದೆ ಎಂದು ರಾಜ್ಯಗಳು ವಾದಿಸಿವೆ.

‘ವಯಕಾಮ್‌ 18’ ಸಂಸ್ಥೆ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ, ಮಧ್ಯಂತರ ಅರ್ಜಿಗಳನ್ನು ತುರ್ತಾಗಿ ವಿಚಾರಣೆ ನಡೆಸುವುದನ್ನು ವಿರೋಧಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry