ವಿಮಾನದಲ್ಲಿ ಮೊಬೈಲ್‌ ಬಳಕೆ ಟ್ರಾಯ್‌ ಶಿಫಾರಸು

7

ವಿಮಾನದಲ್ಲಿ ಮೊಬೈಲ್‌ ಬಳಕೆ ಟ್ರಾಯ್‌ ಶಿಫಾರಸು

Published:
Updated:

ನವದೆಹಲಿ: ವಿಮಾನದಲ್ಲಿ ಗ್ರಾಹಕರಿಗೆ ಮೊಬೈಲ್‌ ಮತ್ತು ಅಂತರ್ಜಾಲ ಸೇವೆಗಳ ಬಳಕೆಗೆ ಅವಕಾಶ ನೀಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಶಿಫಾರಸು ಮಾಡಿದೆ.

ಸ್ಯಾಟಲೈಟ್‌ ಮತ್ತು ಟೆರೆಸ್ಟ್ರಿಯಲ್‌ ನೆಟ್‌ವರ್ಕ್ ಮೂಲಕ ಈ ಸೇವೆಗಳನ್ನು ಬಳಸಲು ಅವಕಾಶ ನೀಡಬಹುದು ಎಂದು ಹೇಳಿದೆ.

ದೇಶಿ ಮತ್ತು ವಿದೇಶಿ ಪ್ರಯಾಣ ಬೆಳೆಸುವವರಿಗೆ ಈ ಸೇವೆ ಕಲ್ಪಿಸುವ ಬಗ್ಗೆ ದೂರಸಂಪರ್ಕ ಇಲಾಖೆಯು ಆಗಸ್ಟ್‌ 20ರಂದು ಟ್ರಾಯ್‌ ಸಲಹೆಯನ್ನು ಕೇಳಿತ್ತು.

ಕನಿಷ್ಠ 3,000 ಮೀಟರ್‌ ಎತ್ತರದಲ್ಲಿ ಇದ್ದಾಗ ಟೆರೆಸ್ಟ್ರಿಯಲ್‌ ಮೊಬೈಲ್‌ ನೆಟ್‌ವರ್ಕ್‌ಗೆ ಒಪ್ಪಿಗೆ ನೀಡಬಹುದು ಎಂದು ಟ್ರಾಯ್‌ ಶಿಫಾರಸು ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry