ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ; ಮೂವರ ಬಂಧನ

7

ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ; ಮೂವರ ಬಂಧನ

Published:
Updated:

ಬೆಂಗಳೂರು: ಚಿಕ್ಕಬಾಣಾವರ ಬಳಿಯ ಕೆರೆಗುಡ್ಡದಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

ಪಶ್ಚಿಮ ಬಂಗಾಳದ ಶಾಹಿದ್ ಶೇಖ್ (29), ಭರತ್ (32) ಹಾಗೂ ಸಲೀಂ ಶೇಖ್ (25) ಬಂಧಿತರು. ಅವರಿಂದ 3 ಮೊಬೈಲ್, 5 ಎಟಿಎಂ ಕಾರ್ಡ್ ಹಾಗೂ ₹2,000 ನಗದು ಜಪ್ತಿ ಮಾಡಲಾಗಿದೆ.

ಕೆಲಸ ಕೊಡಿಸುವ ನೆಪದಿಂದ ಹೊರ ರಾಜ್ಯಗಳಿಂದ ಯುವತಿಯರನ್ನು ನಗರಕ್ಕೆ ಕರೆಸಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಆನ್‌ಲೈನ್‌ ಮೂಲಕವೇ ಆರೋಪಿಗಳು, ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು ಎಂದು ಸೋಲದೇವನಹಳ್ಳಿ ಠಾಣೆಯ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry