ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

7

ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

Published:
Updated:
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

ವಾಷಿಂಗ್ಟನ್‌: ಅಫ್ಘಾನಿಸ್ತಾನದಲ್ಲಿ ಅಮೆರಿಕದ ನಿಯಮಾವಳಿಗಳ ಕುರಿತು ಮಾತನಾಡುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಧಾನಿ ಮೋದಿ ಅವರ ಶೈಲಿ ಅನುಕರಿಸಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

‘ಭಾರತೀಯರ ಉಚ್ಛಾರ ಶೈಲಿ ಹಾಗೂ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಟ್ರಂಪ್‌ ಅನುಕರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಜೂನ್‌ನಲ್ಲಿ ಶ್ವೇತ ಭವನದಲ್ಲಿ ಟ್ರಂಪ್‌ರೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ, ‘ಅತ್ಯಲ್ಪ ಉಪೇಕ್ಷೆಯೊಂದಿಗೆ ದೊಡ್ಡ ಮಟ್ಟದಲ್ಲಿ ಇತರ ರಾಷ್ಟ್ರಕ್ಕೆ ನೆರವು ನೀಡಿರುವ ದೇಶ ಮತ್ತೊಂದಿಲ್ಲ’ ಎಂದು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಕಾರ್ಯದ ಕುರಿತು ಪ್ರಸ್ತಾಪಿಸಿದ್ದರು. 

‘ಮೋದಿ ಟ್ರಂಪ್‌ ಅವರಿಗೆ ಹೇಳಿದ ಮಾತು ಹಾಗೂ ಅಫ್ಘಾನಿಸ್ತಾನದಿಂದ ಅಮೆರಿಕ ಲಾಭ ಪಡೆಯುತ್ತಿದೆ ಎಂಬ ವಿಶ್ವದ ಬೇರೆಲ್ಲ ರಾಷ್ಟ್ರಗಳ ದೃಷ್ಟಿಕೋನದ ಕುರಿತು ಟ್ರಂಪ್‌ ಅವರಿಗೆ ಸ್ಪಷ್ಟತೆ ಸಿಕ್ಕಂತಾಗಿತ್ತು’ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟ್ರಂಪ್‌, ಮೋದಿ ಅವರನ್ನು ಅನುಕರಿಸಿದ್ದಾರೆ ಎನ್ನಲಾದ ವರದಿ ಕುರಿತು ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ನಾಯಕರು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದು, ದೂರವಾಣಿ ಮೂಲಕವೂ ಸಂಭಾಷಣೆ ನಡೆಸಿದ್ದಾರೆ. 2017ರ ಜೂನ್‌ನಲ್ಲಿ ಮೊದಲ ಭೇಟಿಗೂ ಮುನ್ನ ಮೋದಿ ಅವರನ್ನು ‘ನಿಜವಾದ ಮಿತ್ರ’ ಎಂದು ಬಣ್ಣಿಸಿ ಟ್ರಂಪ್‌ ಟ್ವೀಟ್‌ ಮಾಡಿದ್ದರು.

2016ರ ಆಗಸ್ಟ್‌ನಲ್ಲಿ ‘ದಕ್ಷಿಣ ಏಷ್ಯಾ ನೀತಿ’ ಬಹಿರಂಗ ಪಡಿಸಿದ್ದ ಟ್ರಂಪ್‌, ಅಫ್ಘಾನಿಸ್ತಾನ ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ಮಹತ್ವದ ಕೊಡುಗೆ ಅಗತ್ಯತೆ ಕುರಿತು ಪ್ರಸ್ತಾಪಿಸಿದ್ದರು. ಜತೆಗೆ ಯುಎಸ್-ನೇತೃತ್ವದ ಅಂತರರಾಷ್ಟ್ರೀಯ ಪಡೆಗಳ ವಿರುದ್ಧ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ಜಾಗ ಎಂದು ದೂರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry