ಇಂಟರ್ನೆಟ್ ಡೇಟಾ ಬಳಕೆ ನಿಯಂತ್ರಣಕ್ಕೆ ಡೇಟಾಲಿ

7

ಇಂಟರ್ನೆಟ್ ಡೇಟಾ ಬಳಕೆ ನಿಯಂತ್ರಣಕ್ಕೆ ಡೇಟಾಲಿ

Published:
Updated:

ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್ ಡೇಟಾ ಬಳಕೆ ನಿಯಂತ್ರಿಸಲು ಸಹಾಯ ಮಾಡುವ ಗೂಗಲ್ ಆ್ಯಪ್‍ ಡೇಟಾಲಿ (Datally). ಆ್ಯಂಡ್ರಾಯ್ಡ್ ಮತ್ತು ಲಾಲಿಪಾಪ್ ಆಪರೇಟಿಂಗ್ ಸಿಸ್ಟಂ ಇರುವ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಆ್ಯಪ್ ಲಭ್ಯವಿದೆ.

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿರುವ ಡೇಟಾಲಿ ಆ್ಯಪ್ ಬಳಸಿದರೆ ಮೊಬೈಲ್ ಡೇಟಾ ಬಳಕೆಯನ್ನು ನಿಯಂತ್ರಣದಲ್ಲಿಡಬಹುದು. ಇಂತಿಷ್ಟು ಗಂಟೆಗಳಲ್ಲಿ ಎಷ್ಟು ಪ್ರಮಾಣದ ಡೇಟಾ ಬಳಕೆಯಾಗಿದೆ? ನಾವು ಬಳಸುತ್ತಿರುವ ಯಾವ ಆ್ಯಪ್‌ಗೆ ಎಷ್ಟು ಡೇಟಾ ಬಳಕೆಯಾಗಿದೆ ಎಂಬ ಮಾಹಿತಿಯನ್ನು ಈ ಆ್ಯಪ್ ನೀಡುತ್ತದೆ.

ಕಳೆದ ಜೂನ್ ತಿಂಗಳಲ್ಲಿ ಟ್ರಯಾಂಗಲ್ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದ್ದ ಆ್ಯಪ್ ಈಗ ಡೇಟಾಲಿ ಎಂಬ ಹೆಸರಿನಲ್ಲಿ ಹೊಸ ರೂಪ ಪಡೆದುಕೊಂಡಿದೆ.

ಮೊಬೈಲ್ ಫೋನ್‍ಗಳಲ್ಲಿ ಡೇಟಾ ಬಳಕೆ ನಿಯಂತ್ರಿಸುವುದು ಮಾತ್ರ ಟ್ರಯಾಂಗಲ್ ಆ್ಯಪ್‍ಗೆ ಸಾಧ್ಯವಾಗಿತ್ತು. ಆದರೆ ಡೇಟಾಲಿ ಹತ್ತಿರದ ವೈಫೈ ಕನೆಕ್ಷನ್ ಎಲ್ಲಿದೆ ಎಂಬುದನ್ನು ಹುಡುಕಲು ಗೂಗಲ್ ಮ್ಯಾಪ್ ಕೂಡ ತೋರಿಸುತ್ತದೆ.

ಬ್ಯಾಕ್‌ಗ್ರೌಂಡ್ ಆ್ಯಪ್‌ಗಳ ಡೇಟಾ ಬ್ಲಾಕ್ ಮಾಡಲು, ಯಾವ ಆ್ಯಪ್‍ಗಳು ಎಷ್ಟೆಷ್ಟು ಡೇಟಾ ಬಳಸುತ್ತವೆ ಎಂಬುದನ್ನು ತಿಳಿಯಲು ಮತ್ತು ಡೇಟಾ ಬಳಕೆಯನ್ನು ನಿಯಂತ್ರಿಸಿ ಡೇಟಾ ಉಳಿತಾಯ ಮಾಡಲು ಸಹಾಯ ಮಾಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry