ಆಧುನೀಕರಣ ಅಗತ್ಯ

7

ಆಧುನೀಕರಣ ಅಗತ್ಯ

Published:
Updated:

ಪೊಲೀಸರ ಮೇಲೆ ಹಲ್ಲೆ ನಡೆದ ಕೆಲವು ಪ್ರಕರಣಗಳು ಈಚೆಗೆ ವರದಿಯಾಗಿವೆ. ಇದು ಹೊಸತಲ್ಲ. ರಾತ್ರಿ ಗಸ್ತು ಸಂದರ್ಭದಲ್ಲಿ, ಡಕಾಯಿತರನ್ನು ಹಿಡಿಯಲು ಮುಂದಾದ ಸಂದರ್ಭಗಳಲ್ಲಿ ಪೊಲೀಸರ ಮೇಲೆ ದಾಳಿಯಾದ ಅನೇಕ ಉದಾಹರಣೆಗಳಿವೆ. ಇಲಾಖೆ ಇನ್ನೂ ಆಧುನೀಕರಣಗೊಳ್ಳದಿರುವುದರಿಂದ ಪೊಲೀಸರು ಆಗಾಗ ಹಲ್ಲೆಗೆ ಒಳಗಾಗುವಂಥ ಸ್ಥಿತಿ ಒದಗಿದೆ.

ಸಮಾಜಘಾತಕ ಶಕ್ತಿಗಳು ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಪಡೆಯುತ್ತಿರುತ್ತವೆ. ಆದರೆ ಪೊಲೀಸರು ಈಗಲೂ ಹಳೆಯ ಕಾಲದ, ಭಾರವಾದ ಬಂದೂಕುಗಳನ್ನೇ ಹೊತ್ತುಕೊಂಡು ಓಡಾಡಬೇಕಾಗಿದೆ.

ಪೊಲೀಸ್‌ ಇಲಾಖೆಯನ್ನೂ ಆಧುನೀಕರಣಗೊಳಿಸಿ, ಪೊಲೀಸರ ಕೈಗೆ ಒಳ್ಳೆಯ ಶಸ್ತ್ರಾಸ್ತ್ರಗಳನ್ನು ನೀಡಿದರೆ ಸಮಾಜಘಾತಕ ಶಕ್ತಿಗಳನ್ನು ಎದುರಿಸುವ ಧೈರ್ಯ ಅವರಿಗೆ ಬರುತ್ತದೆ. ಇದರಿಂದ ತಾವು ಹಲ್ಲೆಗೊಳಗಾಗುವುದು ತಪ್ಪುವುದರ ಜೊತೆಗೆ ಜನರಿಗೂ ರಕ್ಷಣೆ ಕೊಡಲು ಸಾಧ್ಯವಾಗುತ್ತದೆ.

– ಮುಸ್ಟೂರು ತಿಮ್ಮೇಶ, ಜಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry