ಹಾಕಿ: ರಾಣಿ ಚನ್ನಮ್ಮ ವಿ.ವಿಗೆ ಜಯ

7

ಹಾಕಿ: ರಾಣಿ ಚನ್ನಮ್ಮ ವಿ.ವಿಗೆ ಜಯ

Published:
Updated:

ಬೆಂಗಳೂರು: ಬಸವರಾಜ್‌ ಅವರ ಎರಡು ಗೋಲುಗಳ ನೆರವಿನಿಂದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಂಡ ಇಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಬುಧವಾರ ಜಯದಾಖಲಿಸಿದೆ.

ರಾಣಿ ಚನ್ನಮ್ಮ ವಿ.ವಿ 5–0 ಗೋಲುಗಳಿಂದ ಡಾ.ಅಂಬೇಡ್ಕರ್ ವಿ.ವಿ, ಇಚೆರ್ಲಾ ಎದುರು ಜಯಭೇರಿ ದಾಖಲಿಸಿದೆ. ವಿಜಯೀ ತಂಡದ ಕದರ್ನಾ ಚೌಗ್ಲಾ (2ನೇ ನಿ.), ಫೈಜನ್‌ (6ನೇ ನಿ.), ವೆಂಕಟೇಶ್ ಮಾಗಿ (8ನೇ ನಿ.), ಬಸವರಾಜ್ (33, 50ನೇ ನಿ.) ಗೋಲು ತಂದಿತ್ತರು.

ದಿನದ ಇತರ ಪಂದ್ಯಗಳಲ್ಲಿ ಮೈಸೂರು ವಿಶ್ವವಿದ್ಯಾಲಯ 3–0 ಗೋಲುಗಳಿಂದ ಆದಿಕವಿ ವಿ.ವಿ ವಿರುದ್ಧವೂ, ಶ್ರೀ ಕೃಷ್ಣದೇವರಾಯ ವಿ.ವಿ 4–0ರಲ್ಲಿ ಕೃಷ್ಣ ವಿ.ವಿ ವಿರುದ್ಧವೂ, ಧಾರವಾಡದ ಕರ್ನಾಟಕ ವಿ.ವಿ 1–0ರಲ್ಲಿ ತಿರುಪತಿಯ ವೆಂಕಟೇಶ್ವರ ವಿ.ವಿ ಮೇಲೂ ಗೆಲುವು ದಾಖಲಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry