ಎಸ್.ಜಾನಕಿ ಪ್ರಶಸ್ತಿಗೆ ರಾಜೇಶ್ ಕೃಷ್ಣನ್‌ ಆಯ್ಕೆ

7

ಎಸ್.ಜಾನಕಿ ಪ್ರಶಸ್ತಿಗೆ ರಾಜೇಶ್ ಕೃಷ್ಣನ್‌ ಆಯ್ಕೆ

Published:
Updated:
ಎಸ್.ಜಾನಕಿ ಪ್ರಶಸ್ತಿಗೆ ರಾಜೇಶ್ ಕೃಷ್ಣನ್‌ ಆಯ್ಕೆ

ಬೆಂಗಳೂರು: ಗಾಯಕಿ ಎಸ್‌.ಜಾನಕಿ ಅವರ ಹೆಸರಿನಲ್ಲಿ ಕೋಟದ ಮನಸ್ಮಿತ ಫೌಂಡೇಷನ್ ನೀಡುವ ಎಸ್‌.ಜಾನಕಿ ರಾಷ್ಟ್ರೀಯ ಪ್ರಶಸ್ತಿಗೆ ಗಾಯಕ ರಾಜೇಶ್ ಕೃಷ್ಣನ್ ಆಯ್ಕೆಯಾಗಿದ್ದಾರೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಅಧ್ಯಕ್ಷ ಡಾ.ಸತೀಶ್ ಪೂಜಾರಿ, ‘58,000 ಹಾಡುಗಳಿಗೆ ಧ್ವನಿ ನೀಡಿರುವ ಜಾನಕಮ್ಮ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಪ್ರಶಸ್ತಿ ಹುಟ್ಟುಹಾಕಿದ್ದೇವೆ’ ಎಂದರು.

ಪ್ರಶಸ್ತಿಯು ₹ 1 ಲಕ್ಷ ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿದೆ. ಕುಂದಾಪುರ–ಕೋಟೇಶ್ವರದ ‘ಯುವ ಮೆರಿಡಿಯನ್’ ಸಂಘಟನೆ ಸಹಯೋಗದಲ್ಲಿ ಒಪೆರಾ ಪಾರ್ಕ್‌ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry