ಸಾಧಿಸಿದ್ದೇನು?: ಎಚ್‌.ಡಿ.ಕೆ

7

ಸಾಧಿಸಿದ್ದೇನು?: ಎಚ್‌.ಡಿ.ಕೆ

Published:
Updated:
ಸಾಧಿಸಿದ್ದೇನು?: ಎಚ್‌.ಡಿ.ಕೆ

ಬೆಂಗಳೂರು: ಮಹದಾಯಿ ಹೆಸರಿನಲ್ಲಿ ‘ಕರ್ನಾಟಕ ಬಂದ್‌’ ಮಾಡಿ ಸಾಧಿಸಿದ್ದೇನು ಎಂಬುದನ್ನು ಬಂದ್‌ ಕರೆ ನೀಡಿದವರು ರಾಜ್ಯದ ಜನತೆಗೆ ವಿವರಿಸಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

‘ಇಂದು ನಡೆದ ಬಂದ್‌ ಸರ್ಕಾರಿ ಪ್ರಾಯೋಜಿತ. ಸರ್ಕಾರದ ಪ್ರಾಯೋಜಿತ ಇಲ್ಲ ಎನ್ನುವುದಾದರೆ ಸರ್ಕಾರಿ ಕಚೇರಿ

ಗಳಿಗೆ ಬೀಗ ಏಕೆ ಹಾಕಬೇಕಿತ್ತು’ ಎಂದು ಅವರು ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನಿಸಿದರು.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿ ಬರುತ್ತಾರೆ ಎಂಬ ಕಾರಣಕ್ಕೆ ಬಂದ್‌ ನಡೆದಿದೆಯೇ ಹೊರತು ಮಹದಾಯಿಗಾಗಿ ಅಲ್ಲ. ರಾಹುಲ್‌ ಬಂದಾಗ ತಾವೂ ಬಂದ್‌ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಹಿತ ಬೇಕಾಗಿಲ್ಲ ಎಂದರು.

ತಾವು ಮಾತ್ರ ಸತ್ಯವಂತರು, ಮಿಕ್ಕವರೆಲ್ಲಾ ಸುಳ್ಳು ಹೇಳುವವರು ಎಂಬ ಭಾವನೆ ಮುಖ್ಯಮಂತ್ರಿಗಿದೆ.

– ಎಚ್‌.ಡಿ.ಕುಮಾರಸ್ವಾಮಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry