ನಾಲ್ಕು ವಾರದಲ್ಲಿ ಐದು ಆನೆ ಸಾವು

7

ನಾಲ್ಕು ವಾರದಲ್ಲಿ ಐದು ಆನೆ ಸಾವು

Published:
Updated:
ನಾಲ್ಕು ವಾರದಲ್ಲಿ ಐದು ಆನೆ ಸಾವು

ಚಾಮರಾಜನಗರ: ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ವರ್ಷದ ಆರಂಭದಿಂದ ಇಲ್ಲಿಯವರೆಗೆ ಐದು ಆನೆಗಳು ಮೃತಪಟ್ಟಿವೆ. ಇದರಲ್ಲಿ ಮೂರು ಮರಿಗಳು ಸೇರಿವೆ. ಒಟ್ಟು ನಾಲ್ಕು ಆನೆಗಳು ಅನಾರೋಗ್ಯದಿಂದ ಸಾವಿಗೀಡಾಗಿವೆ. ಗೋಪಾಲಸ್ವಾಮಿ ಬೆಟ್ಟ ವಲಯದ ಹಿರಿಕೆರೆ ಅರಣ್ಯ ಪ್ರದೇಶದಲ್ಲಿ ಗುರುವಾರ ಹೆಣ್ಣಾನೆಯ ಕಳೇಬರ ದೊರೆತಿದ್ದು, ಅದರ ಸಾವಿಗೆ ಕಾರಣ ತಿಳಿದುಬಂದಿಲ್ಲ.

ಓಂಕಾರ್ ಅರಣ್ಯ ವ್ಯಾಪ್ತಿಯಲ್ಲಿ ತಾಯಿಯಿಂದ ಬೇರ್ಪಟ್ಟ ಮರಿಯಾನೆ ತೀವ್ರ ಗಾಯ ಮತ್ತು ಅನಾರೋಗ್ಯದಿಂದ ಜ. 2ರಂದು ಮೃತಪಟ್ಟಿತ್ತು. ಜ. 16ರಂದು ಕುಂದಕೆರೆ ವಲಯಕ್ಕೆ ಸೇರಿದ ಯಲಚೆಟ್ಟಿ ಬೆಟ್ಟದಲ್ಲಿ ಗಾಯಗೊಂಡಿದ್ದ 30–35 ವರ್ಷದ ಆನೆ ಮೃತಪಟ್ಟಿತ್ತು.

ಗೋಪಾಲಸ್ವಾಮಿ ಬೆಟ್ಟ ವಲಯದ ಸೋಮನಾಥಪುರ ಬೀಟ್‌ನಲ್ಲಿ ಎರಡೂವರೆ ವರ್ಷದ ಆನೆ ಅತಿಯಾದ ಬೇಧಿಯಿಂದ ಸಾವನ್ನಪ್ಪಿತ್ತು. ಜ. 23ರಂದು ಕುಂದಕೆರೆ ವಲಯದ ಮಂಗಲ ಗ್ರಾಮದ ಮಾರಿಗುಡಿ ವ್ಯಾಪ್ತಿಯಲ್ಲಿ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಹೆಣ್ಣಾನೆ ಮೃತಪಟ್ಟಿತ್ತು.

ನಾಲ್ಕು ವಾರದ ಅವಧಿಯಲ್ಲಿ ಐದು ಆನೆಗಳು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರಲ್ಲಿ ಕಳವಳ ಮೂಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry