6

ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ: ಡಿಕೆಶಿ

Published:
Updated:
ಮುಖ್ಯಮಂತ್ರಿ ರೇಸ್‍ನಲ್ಲಿ ಇಲ್ಲ: ಡಿಕೆಶಿ

ರಾಮನಗರ: ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಆಗಲು ಸಾಕಷ್ಟು ಹಿರಿಯರು ಇದ್ದಾರೆ. ಹೀಗಾಗಿ ನಾನು ಸದ್ಯ ಸ್ಪರ್ಧೆಯಲ್ಲಿ ಇಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ  ಧ್ವಜಾರೋಹಣ ನೆರವೇರಿಸಿದ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಅವರು ಮುಂದೆ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ ಅದಕ್ಕೆ ಕಾಲ ಕೂಡಿ ಬರಬೇಕು. ಸದ್ಯ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದರು.

ರಾಜ್ಯ ಸರ್ಕಾರವು 2005ರಿಂದ 2015ರವರೆಗೆ ನಡೆದಿರುವ ಕೋಮು ಗಲಭೆಗಳ ವರದಿ ಕೇಳಿದ್ದು, ಅಲ್ಪ ಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ 'ರಾಜ್ಯ ಸರ್ಕಾರವು ರೈತರು,  ಕನ್ನಡಪರ ರಾಟಗಾರರ ವಿರುದ್ಧದ ಪ್ರಕರಣಗಳ ವರದಿ ಕೇಳಿದ್ದು, ಅಂತಹವುಗಳನ್ನು ಮಾತ್ರ ಪರಿಶೀಲಿಸಲು ಚಿಂತನೆ ನಡೆದಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry