‘ಅಮೆರಿಕ ಮೊದಲು ಎಂದರೆ ಅಮೆರಿಕವೊಂದೇ ಎಂದಲ್ಲ’

7
ವಿಶ್ವ ವಾಣಿಜ್ಯ ವೇದಿಕೆ ಸಮಾವೇಶದಲ್ಲಿ ಅಧ್ಯಕ್ಷ ಟ್ರಂಪ್‌

‘ಅಮೆರಿಕ ಮೊದಲು ಎಂದರೆ ಅಮೆರಿಕವೊಂದೇ ಎಂದಲ್ಲ’

Published:
Updated:
‘ಅಮೆರಿಕ ಮೊದಲು ಎಂದರೆ ಅಮೆರಿಕವೊಂದೇ ಎಂದಲ್ಲ’

ದಾವೋಸ್, ಸ್ವಿಟ್ಜರ್ಲೆಂಡ್: ಇಲ್ಲಿ ನಡೆಯುತ್ತಿರುವ ವಿಶ್ವ ವಾಣಿಜ್ಯ ವೇದಿಕೆ ಸಮಾವೇಶದ ತಮ್ಮ ಮೊದಲ ಭಾಷಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನ ಜೊತೆ ಸ್ನೇಹ ಹಾಗೂ ಪಾಲುದಾರಿಕೆಗೆ ಒಲವು ವ್ಯಕ್ತಪಡಿಸಿದ್ದಾರೆ.

‘ಅಮೆರಿಕ ಮೊದಲು’ ಎಂದರೆ ‘ಅಮೆರಿಕವೊಂದೇ’ ಎಂದು ಅರ್ಥವಲ್ಲ ಎಂದು ಅವರು ಸಮರ್ಥನೆ ನೀಡಿದ್ದಾರೆ.

‘ಅಮೆರಿಕವು ವ್ಯಾಪಾರಕ್ಕೆ ಮುಕ್ತವಾಗಿದೆ. ನಾವು ಮತ್ತೆ ಸ್ಪರ್ಧಾತ್ಮಕವಾಗಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.

ರಾಜಕೀಯ ನಾಯಕರು, ಉದ್ಯಮಿಗಳು, ತಂತ್ರಜ್ಞರು ಹಾಗೂ ಹಣಕಾಸು ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದೇಶಿ ಬಂಡವಾಳ ಹೂಡಿಕೆಗೆ ಅಮೆರಿಕ ಪ್ರಶಸ್ತ ಸ್ಥಳ ಎಂದರು.

ಇತರರ ಮೇಲೆ ವೆಚ್ಚವನ್ನು ಹೇರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವವರ ಜೊತೆ ಮುಕ್ತ ವ್ಯಾಪಾರ ಇಲ್ಲ ಎಂದು ಟ್ರಂಪ್ ಇದೇ ವೇಳೆ ಎಚ್ಚರಿಕೆ ನೀಡಿದರು. ‘ನ್ಯಾಯೋಚಿತವಲ್ಲದ ಆರ್ಥಿಕ ಕಾರ್ಯಕ್ರಮಗಳನ್ನು ಅಮೆರಿಕ ಇನ್ನು ಮುಂದೆ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುವುದಿಲ್ಲ’ ಎಂದೂ ಹೇಳಿದರು.

ಐಎಸ್ ವಿರುದ್ಧ ಮೇಲುಗೈ: ಸಿರಿಯಾದಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು, ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಡಿತಲ್ಲಿದ್ದ ಬಹುತೇಕ ಎಲ್ಲ ಪ್ರದೇಶಗಳನ್ನು ಮರು ವಶಪಡಿಸಿಕೊಂಡಿವೆ ಎಂದು ಟ್ರಂಪ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry