ಬೈಕನ್ನೇರಿ ಹೃದಯ ಗೆದ್ದ ಬಿಎಸ್‌ಎಫ್ ಯೋಧೆಯರು

7

ಬೈಕನ್ನೇರಿ ಹೃದಯ ಗೆದ್ದ ಬಿಎಸ್‌ಎಫ್ ಯೋಧೆಯರು

Published:
Updated:
ಬೈಕನ್ನೇರಿ ಹೃದಯ ಗೆದ್ದ ಬಿಎಸ್‌ಎಫ್ ಯೋಧೆಯರು

ನವದೆಹಲಿ: ಅಲ್ಲಿ ಕೆಲವರ ಹೃದಯಬಡಿತ ತಾಳ ತಪ್ಪಿತ್ತು. ಇನ್ನು ಕೆಲವರು ಬಿಟ್ಟ ಬಾಯಿ ಬಿಟ್ಟ ಹಾಗೆಯೇ ಕಣ್ಣರಳಿಸಿ ನೋಡುತ್ತಿದ್ದರು. ಮತ್ತೂ ಕೆಲವರು ಏದುಸಿರು ಬಿಡುತ್ತಿದ್ದರು. ಆದರೆ ಮೋಟರ್‌ ಬೈಕ್‌ಗಳನ್ನು ಏರಿ ಕಸರತ್ತು ಪ್ರದರ್ಶಿಸುತ್ತಿದ್ದ ಮಹಿಳಾ ಯೋಧರು ಇವರೆಲ್ಲರ ಹೃದಯ ಗೆದ್ದರು.

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) 106 ಮಹಿಳಾ ಯೋಧರಿರುವ ‘ಸೀಮಾ ಭವಾನಿ’ ತಂಡ ಮೋಟರ್‌ ಬೈಕ್‌ಗಳಲ್ಲಿ ಕಸರತ್ತು ಪ್ರದರ್ಶಿಸುವಾಗ ಕಂಡು ಬಂದ ದೃಶ್ಯಗಳಿವು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೋಟರ್‌ ಬೈಕ್‌ಗಳಲ್ಲಿ ಕಸರತ್ತು ಪ್ರದರ್ಶಿಸಿದ ಮೊದಲ ಮಹಿಳಾ ತಂಡ ಎಂಬ ಹೆಗ್ಗಳಿಕೆಗೂ ಈ ತಂಡ ಪಾತ್ರವಾಯಿತು.

ಈ ತಂಡವನ್ನು ಸಬ್‌ ಇನ್ಸ್‌ಪೆಕ್ಟರ್ ಸ್ಟಾನ್ಸಿನ್ ನಾರ್ಯಂಗ್ ಮುನ್ನಡೆಸಿದರು. ಚಲಿಸುತ್ತಿದ್ದ ಬೈಕ್‌ ಮೇಲೆ ನಿಂತು ಸೆಲ್ಯೂಟ್ ಮಾಡುತ್ತಾ ನಾರ್ಯಂಗ್ ಮೊದಲ ಕಸರತ್ತು ಪ್ರದರ್ಶಿಸಿದರು. ನಂತರ ತಂಡದ ಸದಸ್ಯರು ತಮ್ಮ ಬೈಕ್‌ಗಳನ್ನು ನಾರ್ಯಂಗ್ ಅವರ ಜತೆ ಗೂಡಿಸುತ್ತಾ ವಿವಿಧ ಕಸರತ್ತು ಪ್ರದರ್ಶಿಸಿದರು.

ತಂಡದ 29 ಸದಸ್ಯರು ಪ್ರದರ್ಶಿಸಿದ ‘ಧ್ವಜ ಪಥಸಂಚಲನ ಪಿರಮಿಡ್’ ಎಲ್ಲರ ಮೆಚ್ಚುಗೆ ಗಳಿಸಿತು. ಈ ಕಸರತ್ತುಗಳ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಗಣರಾಜ್ಯೋತ್ಸವದ ಅತಿಥಿಗಳಾಗಿದ್ದ ಆಸಿಯಾನ್ ರಾಷ್ಟ್ರಗಳ ನಾಯಕರೂ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry