ಸೆಮಿಯಲ್ಲಿ ಭಾರತ–ಪಾಕ್‌ ಪೈಪೋಟಿ

7
19 ವರ್ಷದೊಳಗಿನವರ ವಿಶ್ವಕಪ್‌; ಬಾಂಗ್ಲಾದೇಶ ತಂಡದ ಎದುರು ಜಯ

ಸೆಮಿಯಲ್ಲಿ ಭಾರತ–ಪಾಕ್‌ ಪೈಪೋಟಿ

Published:
Updated:
ಸೆಮಿಯಲ್ಲಿ ಭಾರತ–ಪಾಕ್‌ ಪೈಪೋಟಿ

ಕ್ವೀನ್ಸ್‌ಟೌನ್‌, ನ್ಯೂಜಿಲೆಂಡ್‌: ಪಂಜಾಬ್‌ನ ಬಲಗೈ ಬ್ಯಾಟ್ಸ್‌ಮನ್‌ ಶುಭಮನ್‌ ಗಿಲ್‌ (86 ರನ್) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಸೆಮಿಫೈನಲ್‌ ಪ್ರವೇಶಿಸಿದೆ.

ಬಾಂಗ್ಲಾದೇಶ ಎದುರಿನ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತ 131 ರನ್‌ಗಳಿಂದ ಗೆದ್ದಿದೆ. ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಪಂದ್ಯವು ಜನವರಿ 30ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪೃಥ್ವಿ ಶಾ ಬಳಗ 49.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 265 ರನ್‌ ಕಲೆಹಾಕಿದೆ. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ 42.1 ಓವರ್‌ಗಳಲ್ಲಿ 134ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ನಾಗರಕೋಟಿ ದಾಳಿ: ವೇಗದ ಬೌಲರ್ ಕಮಲೇಶ್‌ ನಾಗರಕೋಟಿ (18ಕ್ಕೆ3) ಅವರ ದಾಳಿಗೆ ಬಾಂಗ್ಲಾ ತಂಡದ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಪಿನಾಕ ಘೋಷ್‌ (43, 75ಎ, 3ಬೌಂ) ಬಾಂಗ್ಲಾ ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಕಲೆಹಾಕಲಿಲ್ಲ. ಅಫೀಫ್‌ ಹುಸೇನ್ 18 ರನ್ ಗಳಿಸಿದ್ದೇ ಬಾಂಗ್ಲಾ ತಂಡದ ಎರಡನೇ ಅಧಿಕ ಸ್ಕೋರ್ ಎನಿಸಿತು.

55 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡ ಬಳಿಕ ದಿಢೀರ್ ಕುಸಿತ ಅನುಭವಿಸಿತು. ಶಿವಂ ಮಾವಿ (27ಕ್ಕೆ2), ಅಭಿಷೇಕ್‌ ಶರ್ಮಾ (11ಕ್ಕೆ2) ತಲಾ ಎರಡು ವಿಕೆಟ್‌ ಗಳಿಸಿ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

ಗಿಲ್ ಅರ್ಧಶತಕ: ಆರಂಭಿಕರಾದ ನಾಯಕ ಪೃಥ್ವಿ ಶಾ (40, 54ಎ, 5ಬೌಂ) ಭಾರತಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಭಾರತ ತಂಡ 16 ರನ್‌ಗಳಿಗೆ ಮನ್‌ಜ್ಯೋತ್ ಕಾಲ್ರಾ (9) ಅವರ ವಿಕೆಟ್ ಕಳೆದುಕೊಂಡಾಗ ಶುಭಮನ್‌ ಗಿಲ್‌ ಆಸರೆಯಾದರು. 94 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಒಳಗೊಂಡಂತೆ 86ರನ್‌ ಕಲೆಹಾಕಿದರು. ವಿಕೆಟ್ ಕೀಪರ್ ಹರ್ವಿಕ್ ದೇಸಾಯಿ (34) ಹಾಗೂ ಅಭಿಷೇಕ್ ಶರ್ಮಾ (50, 49ಎ, 6ಬೌಂ) ಅರ್ಧಶತಕ ದಾಖಲಿಸಿ ರನ್ ವೇಗ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 49.2 ಓವರ್‌ಗಳಲ್ಲಿ 265 (ಪೃಥ್ವಿ ಶಾ 54ಕ್ಕೆ4, ಮನ್‌ಜ್ಯೋತ್ ಕಾಲ್ರಾ 9, ಶುಭಮನ್ ಗಿಲ್‌ 86, ಹರ್ವಿಕ್ ದೇಸಾಯಿ 34, ರಿಯಾನ್ ಪರಾಗ್‌ 15, ಅಭಿಷೇಕ್‌ ಶರ್ಮಾ 50).

ಬಾಂಗ್ಲಾದೇಶ: 42.1 ಓವರ್‌ಗಳಲ್ಲಿ 134 (ಪಿನಾಕ ಘೋಷ್‌ 43, ಅಫೀಫ್ ಹೊಸೈನ್‌ 18; ಕಮಲೇಶ್ ನಾಗರಕೋಟಿ 18ಕ್ಕೆ3, ಅಂಕುಲ್ ಶಾರ್ದೂಲ್ ರಾಯ್‌ 14ಕ್ಕೆ1, ಅಭಿಷೇಕ್ ಶರ್ಮಾ 11ಕ್ಕೆ2, ಶಿವಂ ಮಾವಿ 27ಕ್ಕೆ2).

ಫಲಿತಾಂಶ: ಭಾರತಕ್ಕೆ 131 ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry