ಫೈನಲ್‌ಗೆ ವರ್ಷಾ ಸಂಜೀವ್‌

7

ಫೈನಲ್‌ಗೆ ವರ್ಷಾ ಸಂಜೀವ್‌

Published:
Updated:
ಫೈನಲ್‌ಗೆ ವರ್ಷಾ ಸಂಜೀವ್‌

ಬೆಂಗಳೂರು: ಕರ್ನಾಟಕದ ವರ್ಷಾ ಸಂಜೀವ್‌ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಫೈನಲ್‌ ಪ್ರವೇಶಿಸಿದ್ದಾರೆ.

ಮಹಿಳೆಯರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವರ್ಷಾ 32–50, 82–13, 94–69, 30–66, 62–46ರಲ್ಲಿ ದೆಹಲಿಯ ಕೀರತ್‌ ಭಂಡಾಲ್ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ರಾಜ್ಯದ ಆಟಗಾರ್ತಿ ಮಧ್ಯಪ್ರದೇಶದ ಅಮೀ ಕಮಾನಿ ಎದುರು ಆಡಲಿದ್ದಾರೆ.

ಹಾಲಿ ಚಾಂಪಿಯನ್‌ ಕಮಾನಿ ಇನ್ನೊಂದು ಸೆಮಿಫೈನಲ್‌ನಲ್ಲಿ 27–52, 54–71, 75–66, 74–38, 69–21ರಲ್ಲಿ ಕರ್ನಾಟಕದ ವಿದ್ಯಾ ಪಿಳ್ಳೈಗೆ ಸೋಲುಣಿಸಿದರು.

ಪುರುಷರ ವಿಭಾಗದಲ್ಲಿ ಸುಮಿತ್‌ ತಲ್ವಾರ್ ಹಾಗೂ ಮಲ್ಕೀತ್ ಸಿಂಗ್ ಫೈನಲ್ ತಲುಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry