ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್: ಸಾಹು ಮಾನೆಗೆ ಚಿನ್ನದ ಪದಕ

Last Updated 27 ಜನವರಿ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾರಾಷ್ಟ್ರದ ಸಾಹು ಟಿ. ಮಾನೆ ಅವರು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಕ್ಲಬ್ ಮೊದಲ ಬಾರಿಗೆ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್ ನ 10 ಮೀಟರ್ ರೈಫಲ್ ಪಿಪ್‌ಸೈಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಶನಿವಾರ ನಡೆದ ಎಂಟು ಶೂಟರ್ ಗಳ ನಡುವಿನ ಫೈನಲ್‌ನಲ್ಲಿ ಸಾಹು 248.6 ಪಾಯಿಂಟ್ಸ್ ಕಲೆ ಹಾಕಿ ₹ 1 ಲಕ್ಷ ಬಹುಮಾನ ಪಡೆದರು. ಪಶ್ಚಿಮ ಬಂಗಾಳದ ಮೆಹುಲಿ ಫೋಷ್ 248.3 ಪಾಯಿಂಟ್ಸ್ ಗಳಿಸಿ ತುರುಸಿನ ಪೈಪೋಟಿ ಒಡ್ಡಿದರು. ಮೆಹುಲಿ ಎರಡನೇ ಸ್ಥಾನ ಗಳಿಸಿ ₹ 50 ಸಾವಿರ ತಮ್ಮದಾಗಿಸಿಕೊಂಡರು.

ಗದಗ ಜಿಲ್ಲೆಯ ಲಕ್ಕುಂಡಿಯ ಮೇಘನಾ ಸಜ್ಜನವರ 226.7 ಪಾಯಿಂಟ್ಸ್ ಕಲೆ ಹಾಕಿ ಕಂಚಿನ ಪದಕ ಪಡೆದರು. ಇವರಿಗೆ ₹ 25 ಸಾವಿರ ಲಭಿಸಿತು.

ಕರ್ನಾಟಕದ ರಾಕೇಶ್ ಮನಪತ್ (203.8ಪಾಂ.) ನಾಲ್ಕನೇ ಸ್ಥಾನ ಗಳಿಸಿದರು. ಆತಿಥೇಯ ರಾಜ್ಯದ ಕೆ.ಪಿ. ಸುಹಾಸ್ (184.3), ಕೆ. ತೇಜಸ್ (162.8), ಆರ್.ಡಿ . ಸೂರ್ಯ (139.8) ಮತ್ತು ಮಹಾರಾಷ್ಟ್ರದ ವೀಣಾ ಬಿ. ಪಾಟೀಲ (119.2) ಕ್ರಮವಾಗಿ ನಂತರದ ನಾಲ್ಕು ಸ್ಥಾನ ಪಡೆದರು.

ಸನ್ಮಾನ: ಒಲಿಂಪಿಯನ್ ಗಳಾದ ಚಿಕ್ಕಬಳ್ಳಾಪುರದ ಸುಮಾ ಶಿರೂರ ಮತ್ತು ಬೆಂಗಳೂರಿನ ಪಿ.ಎನ್. ಪ್ರಕಾಶ್ ಅವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.

ಭಾನುವಾರದಿಂದ ಎರಡು ದಿನ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆ ನಡೆಯಲಿವೆ. ಪ್ರಕಾಶ್ ಅವರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT