ಹಠ ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ

7

ಹಠ ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ

Published:
Updated:
ಹಠ ಹಿಡಿದು ಭಕ್ತರಿಗೆ ದರ್ಶನ ನೀಡುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ

ತುಮಕೂರು: ಶನಿವಾರವಷ್ಟೇ ಚಿಕಿತ್ಸೆ ಪಡೆದು ಬೆಂಗಳೂರಿನಿಂದ ಮಠಕ್ಕೆ ಮರಳಿರುವ ಸಿದ್ದಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ಭಾನುವಾರ ತಾವು ಭಕ್ತರಿಗೆ ದರ್ಶನ ನೀಡಲೇಬೇಕು ಎಂದು ಹಠ ಹಿಡಿದರು.

ಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹಾಗೂ ವೈದ್ಯರು ವಿಶ್ರಾಂತಿಯ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ ಸ್ವಾಮೀಜಿ ಒಪ್ಪದೇ ತಾವು ದರ್ಶನ ನೀಡಲೇಬೇಕು ಎಂದು ಪಟ್ಟು ಹಿಡಿದರು ಎಂದು ತಿಳಿದಿದೆ.

ತಾವೇ ಪೇಠ ಸುತ್ತಿಕೊಳ್ಳಲು ಯತ್ನಿಸಿದಾಗ ಅನಿವಾರ್ಯವಾಗಿ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಲು ವ್ಯವಸ್ಥೆ ಮಾಡಲಾಯಿತು.

ಸ್ವಾಮೀಜಿ ಎಂದಿನಂತೆ ಮಂಚದ ಮೇಲೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry