ಸರಕು ಸಾಗಣೆ ಏಕರೂಪದ ಜಿಎಸ್‌ಟಿ: ಚಿಂತನೆ

7

ಸರಕು ಸಾಗಣೆ ಏಕರೂಪದ ಜಿಎಸ್‌ಟಿ: ಚಿಂತನೆ

Published:
Updated:

ನವದೆಹಲಿ : ಸರಕುಗಳ ಪೂರೈಕೆಯಲ್ಲಿ ಬಳಸುವ ಬಹು ಮಾದರಿಯ ಸಾರಿಗೆ ವಿಧಾನಗಳಿಗೆ ಏಕರೂಪದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯಿಸಬೇಕು ಎನ್ನುವ ಬೇಡಿಕೆಗೆ ವಾಣಿಜ್ಯ ಸಚಿವಾಲಯ ಸಹಮತ ವ್ಯಕ್ತಪಡಿಸಿದೆ.

ವಾಹನ ತಯಾರಕರ ಮೇಲಿನ ತೆರಿಗೆ ಪಾವತಿ ಹೊರೆ ತಗ್ಗಿಸಲು ಮತ್ತು ಸರಕು ಸಾಗಣೆ ಸೇವೆಯಲ್ಲಿ ಸುಧಾರಣೆ ತರಲು ಒಂದೇ ಬಗೆಯ ಜಿಎಸ್‌ಟಿ ಇರುವುದು ಒಳ್ಳೆಯದು ಎನ್ನುವುದು ಸಚಿವಾಲಯದ ನಿಲುವಾಗಿದೆ.

ಬಹುಮಾದರಿಯ ಸರಕು ಸಾಗಣೆಯು, ಒಂದಕ್ಕಿಂತ ಹೆಚ್ಚು ವಿಧಾನಗಳನ್ನು ಒಳಗೊಂಡಿರುತ್ತದೆ. ರಸ್ತೆ, ರೈಲು ಮತ್ತು ಜಲಮಾರ್ಗ ಬಳಸಿ ಸರಕುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಈ ಬಗೆಯಲ್ಲಿ,  ಒಂದಕ್ಕಿಂತ ಹೆಚ್ಚು ವಿಧಾನಗಳಲ್ಲಿ ಸರಕು ಸಾಗಿಸುವುದಕ್ಕೆ ಬಳಕೆಯಾಗುವ ವಾಹನಗಳಿಗೆ ಅನ್ವಯಿಸುವ ಜಿಎಸ್‌ಟಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ಭಾರತೀಯ ವಾಹನ ತಯಾರಕರ ಸಂಘವು (ಎಸ್‌ಐಎಎಂ) ವಾಣಿಜ್ಯ ಸಚಿವಾಲಯದ ಸರಕು ಸಾಗಣೆ ಇಲಾಖೆಯ ಗಮನ ಸೆಳೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry