‘ಆಧಾರ್ ವ್ಯಕ್ತಿ ವಿವರವಲ್ಲ, ಗುರುತು ಮಾತ್ರ’

4

‘ಆಧಾರ್ ವ್ಯಕ್ತಿ ವಿವರವಲ್ಲ, ಗುರುತು ಮಾತ್ರ’

Published:
Updated:
‘ಆಧಾರ್ ವ್ಯಕ್ತಿ ವಿವರವಲ್ಲ, ಗುರುತು ಮಾತ್ರ’

ನವದೆಹಲಿ : ‘ಆಧಾರ್ ಗುರುತಿನ ಚೀಟಿ ಮಾತ್ರ. ಅದು ವ್ಯಕ್ತಿ ವಿವರಗಳನ್ನು ನೀಡುವ ಚೀಟಿ ಅಲ್ಲ. ಆಧಾರ್‌ ಜತೆಗೆ ಆಯಾ ವ್ಯಕ್ತಿಗಳ ಡಿಎನ್‌ಎ ಮಾದರಿಯನ್ನು ಜೋಡಿಸುವ ಯೋಚನೆ ಇಲ್ಲ’ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಜಯ್ ಭೂಷಣ್‌ ಪಾಂಡೆ ಹೇಳಿದ್ದಾರೆ.

‘ವ್ಯಕ್ತಿಗಳ ಗುರುತು ಪತ್ತೆಗೆ ಅವರ ಬೆರಳಿನ ಅಚ್ಚು ಮತ್ತು ಕಣ್ಣಿನ ಪಾಪೆಯ ಮಾದರಿಯೇ ಸಾಕು. ಡಿಎನ್‌ಎ ಮಾದರಿಯ ಅವಶ್ಯಕತೆ ಇಲ್ಲ. ಆಧಾರ್‌ ಮಾಹಿತಿಗಳ ರಕ್ಷಣೆಗೆ ಪ್ರಬಲ ಕಾನೂನಿನ ನೆರವಿದೆ. ವ್ಯಕ್ತಿಗಳ ಜೈವಿಕ ಮಾಹಿತಿಗಳನ್ನು ಪ್ರಾಧಿಕಾರವು ಯಾರಿಗೂ ನೀಡುವುದಿಲ್ಲ’ ಎಂದು ಟ್ವಿಟರ್‌ನಲ್ಲಿ ಆಧಾರ್ ಪ್ರಾಧಿಕಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry