ಪಶ್ಚಿಮ ಬಂಗಾಳ: ಸೇತುವೆಯಿಂದ ಕೆಳಗೆ ಬಿದ್ದ ಬಸ್‌, ಎರಡು ಸಾವು

7

ಪಶ್ಚಿಮ ಬಂಗಾಳ: ಸೇತುವೆಯಿಂದ ಕೆಳಗೆ ಬಿದ್ದ ಬಸ್‌, ಎರಡು ಸಾವು

Published:
Updated:
ಪಶ್ಚಿಮ ಬಂಗಾಳ: ಸೇತುವೆಯಿಂದ ಕೆಳಗೆ ಬಿದ್ದ ಬಸ್‌, ಎರಡು ಸಾವು

ಮುರ್ಷಿದಾಬಾದ್: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಜಿಲ್ಲೆಯ ದೌಲತಾಬಾದ್‌ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ ಬಸ್‌ ಸೋಮವಾರ ಬೆಳಗ್ಗೆ ಸೇತುವೆಯಿಂದ ಕೆಳಗೆ ಬಿದಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಬಸ್‌ ನಾಡಿಯಾ ಜಿಲ್ಲೆಯಿಂದ ಮಾಲ್ಡಾಗೆ ಹೊರಟ್ಟಿತ್ತು. ಕೋಲ್ಕತ್ತದಿಂದ ಸುಮಾರು 220 ಕಿ.ಮೀ ದೂರದಲ್ಲಿರುವ ದೌಲತಾಬಾದ್‌ ಸಮೀಪ ಘಟನೆ ನಡೆದಿದೆ.

ಸೇತುವೆ ಬಳಿ ಬಸ್‌ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಕೆಳಗೆ ಬಿತ್ತು ಎಂದು ಬಸ್‌ ಚಾಲಕ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಸ್ಥಳದಲ್ಲಿ ಸ್ಥಳೀಯರು ಸಣ್ಣ ದೋಣಿಗಳನ್ನು ಬಳಸಿ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್‌ ಮೂಲಕ ಬಸ್‌ ಅನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದಾರೆ.

ಸದ್ಯ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry