ಕಪ್ಪಲಮಡಗು ಅಭಿವೃದ್ಧಿಗೆ ₹ 50 ಲಕ್ಷ ಬಿಡುಗಡೆ

7

ಕಪ್ಪಲಮಡಗು ಅಭಿವೃದ್ಧಿಗೆ ₹ 50 ಲಕ್ಷ ಬಿಡುಗಡೆ

Published:
Updated:

ಮುಳಬಾಗಿಲು: ‘ಕಪ್ಪಲಮಡಗು ಗ್ರಾಮದ ಅಭಿವೃದ್ಧಿಗೆ ₹ 50 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಸಿಮೆಂಟ್ ರಸ್ತೆ, ಚರಂಡಿ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.

ತಾಲ್ಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಗ್ರಾಮದಲ್ಲಿ ಹಿಂದೂ ದೇವಾಲಯಗಳ ಅಭಿವೃದ್ಧಿ ವೈಯಕ್ತಿಕವಾಗಿ ಹಣಕಾಸು ನೆರವು ನೀಡುತ್ತಿದ್ದೇನೆ. ಜಾತಿ ಧರ್ಮ ಬೇಧ ಮಾಡದೆ ದರ್ಗಾ, ಪ್ರಾರ್ಥನಾ ಮಂದಿರಗಳಿಗೂ ಆರ್ಥಿಕ ಸಹಾಯ ಮಾಡುತ್ತಿದ್ದೇನೆ ಎಂದರು.

ಗ್ರಾಮದ ದರ್ಗಾ ದುರಸ್ತಿಗೆ ವೈಯಕ್ತಿಕವಾಗಿ ₹ 10ಲಕ್ಷ ನೀಡಿದ್ದೇನೆ. ಏಳು ಶತಮಾನದ ಪುರಾಣ ಪ್ರಸಿದ್ಧ ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ₹ 2 ಲಕ್ಷ ಕೊಟ್ಟಿದ್ದೇನೆ. ಹೆಚ್ಚುವರಿಯಾಗಿ ಇನ್ನೂ ₹ 3 ಲಕ್ಷ ಕೊಡುತ್ತೇನೆ ಎಂದು ಹೇಳಿದರು.

ಜೆಡಿಎಸ್‌ನ ಹಲವು ಮುಖಂಡರು ಶಾಸಕರ ಬಣಕ್ಕೆ ಸೇರ್ಪಡೆಯಾದರು. ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್‌ ಕುಮಾರ್‌, ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ಟೌನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಬಾಜ್‌ ಖಾನ್‌, ಉದ್ಯಮಿ ಜಿ.ವೆಂಕಟರವಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry