ಅಗ್ರಸ್ಥಾನದಲ್ಲಿ ಅಮನ್‌ ಪ್ರೀತ್‌ ಸಿಂಗ್‌

7
ರಾಷ್ಟ್ರೀಯ ಶೂಟಿಂಗ್‌: ಇಂದು ಪ್ರಶಸ್ತಿಗಾಗಿ ಪೈಪೋಟಿ

ಅಗ್ರಸ್ಥಾನದಲ್ಲಿ ಅಮನ್‌ ಪ್ರೀತ್‌ ಸಿಂಗ್‌

Published:
Updated:
ಅಗ್ರಸ್ಥಾನದಲ್ಲಿ ಅಮನ್‌ ಪ್ರೀತ್‌ ಸಿಂಗ್‌

ಹುಬ್ಬಳ್ಳಿ: ಒ.ಎನ್‌.ಜಿ.ಸಿ. ಪ್ರತಿನಿಧಿಸಿರುವ ಅಂತರರಾಷ್ಟ್ರೀಯ ಶೂಟರ್‌ ಅಮನ್‌ಪ್ರೀತ್‌ ಸಿಂಗ್‌ ಅವರು ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಕ್ಲಬ್‌ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮುಕ್ತ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಸೋಮವಾರದ ಅಂತ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ.

ಕ್ಲಬ್‌ನ ಶೂಟಿಂಗ್‌ ರೇಂಜ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪಂಜಾಬ್‌ನ ಅಮನಪ್ರೀತ್‌ ಒಟ್ಟು 400ಕ್ಕೆ388 ಪಾಯಿಂಟ್ಸ್‌ ಕಲೆ ಹಾಕಿದರು. ಭಾನು ವಾರದ ಅಂತ್ಯಕ್ಕೆ ಮೊದಲ ಸ್ಥಾನದಲ್ಲಿದ್ದ ಕರ್ನಾಟಕದ ಸಾಗರಸಿಂಗ್ ಬೇಡಿ ಎರಡನೇ ಸ್ಥಾನಕ್ಕೆ ಕುಸಿದರು. ಅವರು ಒಟ್ಟು 381 ಪಾಯಿಂಟ್ಸ್‌ ಗಳಿಸಿದ್ದರು. ಉತ್ತರ ಪ್ರದೇಶದ ಸೌರಭ್‌ ಚೌಧರಿ (379 ಪಾಯಿಂಟ್ಸ್‌) ಮೂರನೇ ಸ್ಥಾನದಲ್ಲಿದ್ದಾರೆ.

ಅಮನಪ್ರೀತ್‌ ಹೋದ ವರ್ಷ ನವದೆಹಲಿಯ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆದಿದ್ದ ಐ.ಎಸ್‌.ಎಸ್‌.ಎಫ್‌. ವಿಶ್ವಕಪ್‌ನ 50 ಮೀಟರ್‌ ಪಿಸ್ತೂಲ್‌ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು. ಆದ್ದರಿಂದ ಅವರಿಗೆ ಚುರುಕಿನ ಪೈಪೋಟಿ ನೀಡಲು ಯುವ ಶೂಟರ್‌ಗಳಿಗೆ ಸಾಧ್ಯವಾಗಲಿಲ್ಲ.

ಒಟ್ಟು 13 ಸುತ್ತುಗಳು ಪೂರ್ಣ ಗೊಂಡಿದ್ದು, ಮೂರು ಸುತ್ತುಗಳು ಬಾಕಿಯಿವೆ.  ಉತ್ತರಪ್ರದೇಶದ ಎಸ್‌. ಖುಷ್‌ (379), ಆರ್ಮಿ ತಂಡದ ಗಿರಿಧಾಮ್‌ (378), ಉತ್ತರ ಪ್ರದೇಶದ ಬಿ. ಹರ್ಷಿತ್‌ (377), ಅಸ್ಸಾಂನ ಅಮರೇಶ ಭಾರದ್ವಾಜ್‌ (377) ಮತ್ತು ಮಹಾರಾಷ್ಟ್ರದ ನಂದಕಿಶೋರ (372) ಅವರು ಕ್ರಮವಾಗಿ ನಾಲ್ಕ ರಿಂದ ಎಂಟರವರೆಗೆ ಸ್ಥಾನಗಳನ್ನು ಹೊಂದಿ ದ್ದಾರೆ. ಮಂಗಳವಾರ ಕೊನೆಯ ಮೂರು ಸುತ್ತಿನ ಸ್ಪರ್ಧೆಗಳು ನಡೆಯಲಿದ್ದು, ಒಲಿಂಪಿಯನ್‌ ಪಿ.ಎನ್‌. ಪ್ರಕಾಶ್‌ ಕಣಕ್ಕಿಳಿಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry