ಮಕ್ಕಳಸ್ನೇಹಿ ಗ್ರಾಮ ನಿರ್ಮಾಣಕ್ಕೆ ಒಪ್ಪಂದ

7

ಮಕ್ಕಳಸ್ನೇಹಿ ಗ್ರಾಮ ನಿರ್ಮಾಣಕ್ಕೆ ಒಪ್ಪಂದ

Published:
Updated:

ಬೆಂಗಳೂರು: ಮಕ್ಕಳ ಸ್ನೇಹಿ ಗ್ರಾಮ ನಿರ್ಮಾಣ ಯೋಜನೆಗಾಗಿ ಇನ್ಫೊಸಿಸ್ ಪ್ರತಿಷ್ಠಾನವು ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಗ್ರಾಮೀಣ ಮಕ್ಕಳಿಗೆ ಉತ್ತಮ ಆರೋಗ್ಯ, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಈ ಯೋಜನೆಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರನ್ವಯ ಮುಂದಿನ ಮೂರು ವರ್ಷಗಳು ಅನುದಾನ ನೀಡಲಿದ್ದೇವೆ ಎಂದು ಪ್ರತಿಷ್ಠಾನದ ಪ್ರತಿನಿಧಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲಕಾರ್ಮಿಕರಿಲ್ಲದ ಗ್ರಾಮ ನಿರ್ಮಾಣ, ನೂರಕ್ಕೆ ನೂರರಷ್ಟು ಮಕ್ಕಳನ್ನು ಶಾಲೆಗೆ ದಾಖಲಿಸುವುದು, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛ ಗ್ರಾಮ ನಿರ್ಮಾಣ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇವೆ.

10 ಸಾವಿರ ಮಕ್ಕಳು ಹಾಗೂ ಮಹಿಳೆಯರಿಗೆ ಗ್ರಾಮಗಳಲ್ಲಿ ಶಿಕ್ಷಣ ಮತ್ತು ವೃತ್ತಿ ತರಬೇತಿ ಶಿಬಿರ ಆಯೋಜನೆ

ಮಾಡಲಾಗುವುದುಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry