ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ 1ರಂದು

7

ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ 1ರಂದು

Published:
Updated:

ಬೈಲಹೊಂಗಲ: ತಾಲ್ಲೂಕಿನ ತಿರುಳ್ಗನ್ನಡ ನಾಡು ಒಕ್ಕುಂದ ಗ್ರಾಮದ ಉತ್ಸವ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ. 1ರಂದು ತಿರುಳ್ಗನ್ನಡ ನಾಡು ಒಕ್ಕುಂದ ಉತ್ಸವ ನಡೆಯಲಿದೆ.

ಅಂದು ಬೆಳಿಗ್ಗೆ 8.30ಕ್ಕೆ ನಯಾನಗರ ಸುಖಾದೇವಾನಂದ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ಕಲ್ಲಗುಡಿ (ತ್ರಿಕೂಟೇಶ್ವರ) ದೇವಸ್ಥಾನದಿಂದ ಶಾಲಾ ಮೈದಾನದವರೆಗೆ ನೃಪತುಂಗ ಜ್ಯೋತಿ ಪ್ರದೀಪನ ಮೆರವಣಿಗೆ ನಡೆಯಲಿದೆ. ಸಂಜೆ 5ರಿಂದ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. 6ಕ್ಕೆ ಉತ್ಸವದ ಉದ್ಘಾಟನೆಯನ್ನು ಶಾಸಕ ಡಾ.ವಿಶ್ವನಾಥ ಪಾಟೀಲ ನೆರವೇರಿಸುವರು.

ರಾಚೋಟಿ ಸ್ವಾಮೀಜಿ, ಬೇವಿನಕೊಪ್ಪ ಆನಂದಾಶ್ರಮದ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಪರ್ವತಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಐಜಿಪಿ ಅಲೋಕಕುಮಾರ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು. ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ, ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸಿ.ಬಿ. ಗಣಾಚಾರಿ ಉಪನ್ಯಾಸ ನೀಡುವರು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಸಿ.ಕೆ. ಮೆಕ್ಕೇದ ತಿಳಿಸಿದ್ದಾರೆ.

ಉಳವಿ ಜಾತ್ರೆಗೆ ಬಸ್ ‌

ಬೈಲಹೊಂಗಲ: ಫೆ.1ರಂದು ನಡೆಯಲಿರುವ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರೆ ಅಂಗವಾಗಿ ಸಾರಿಗೆ ಘಟಕದಿಂದ ಬಸ್‌ಗಳನ್ನು ಕಾರ್ಯಾಚರಣೆ ನಡೆಸಲಾಗುವುದು ಎಂದು ಘಟಕ ವ್ಯವಸ್ಥಾಪಕ ಸಂತೋಷ ಕಮತ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry