ಗೌರಿ ಜನ್ಮದಿನ ಬಿಜೆಪಿ ವಿರುದ್ಧದ ಪ್ರಚಾರಕ್ಕೆ ಬಳಕೆ: ಸುರೇಶ್‌ ಕುಮಾರ್‌

7

ಗೌರಿ ಜನ್ಮದಿನ ಬಿಜೆಪಿ ವಿರುದ್ಧದ ಪ್ರಚಾರಕ್ಕೆ ಬಳಕೆ: ಸುರೇಶ್‌ ಕುಮಾರ್‌

Published:
Updated:

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮವು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಪ್ರಚಾರಕ್ಕೆ ವೇದಿಕೆಯಾಗಿತ್ತು ಎಂದು ಬಿಜೆಪಿ ವಕ್ತಾರ ಎಸ್. ಸುರೇಶ್ ಕುಮಾರ್ ಟೀಕಿಸಿದರು.

ಗೌರಿ ಲಂಕೇಶ್ ಟ್ರಸ್ಟ್‌ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗೌರಿ ಸಾಧನೆ ಕುರಿತು ಯಾರೊಬ್ಬರೂ ಮಾತನಾಡಲಿಲ್ಲ. ಅವರ ಹತ್ಯೆ ಮಾಡಿದವರನ್ನು ಈವರೆಗೂ ಬಂಧಿಸದ ಸರ್ಕಾರದ ವೈಫಲ್ಯವನ್ನೂ ಖಂಡಿಸಲಿಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ದೂರಿದರು.

ದಕ್ಷಿಣ ಕನ್ನಡದವರು ಗೌರಿ ಹತ್ಯೆ ಮಾಡಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ. ಅವರ ಬಳಿ ಅಷ್ಟು ಖಚಿತ ಮಾಹಿತಿ ಇದ್ದರೆ ಆಧಾರ ಸಹಿತ ಗೃಹ ಸಚಿವರಿಗೆ ಮಾಹಿತಿ ನೀಡಬಹುದಿತ್ತು. ಸಂಶಯದ ಮುಳ್ಳನ್ನು ಯಾರ ಕಡೆಗೋ ತಿರುಗಿಸುವ ಯತ್ನ ಮಾಡಿರುವುದು ಸರಿಯಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry