ವೈ.ಎನ್.ಹೊಸಕೋಟೆ: ಬೀದಿಗೆ ಬದನೆ ಸುರಿದು ರೈತರ ಆಕ್ರೋಶ

7

ವೈ.ಎನ್.ಹೊಸಕೋಟೆ: ಬೀದಿಗೆ ಬದನೆ ಸುರಿದು ರೈತರ ಆಕ್ರೋಶ

Published:
Updated:

ವೈ.ಎನ್.ಹೊಸಕೋಟೆ: ಮಧ್ಯವರ್ತಿಗಳ ಹಾವಳಿಯಿಂದ ಬದನೆಕಾಯಿ ಬೆಲೆ ಕಡಿಮೆಯಾಗಿರುವುದರಿಂದ ಬೇಸರಗೊಂಡ ರೈತ ಗ್ರಾಮದ ಸಂತೆಯಲ್ಲಿ ಬೀದಿಗೆ ಬದನೆಕಾಯಿ ಸುರಿದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು.

ಆರ್.ಡಿ.ರೊಪ್ಪ ಗ್ರಾಮದ ರೈತ ಪರಮೇಶ್ ಸಂತೆಯಲ್ಲಿ ಮಾರಾಟ ಮಾಡಲು ಸುಮಾರು 30 ಚೀಲ ಬದನೆಕಾಯಿ ಕಿತ್ತು ತಂದಿದ್ದಾರೆ. ಪ್ರತಿಯೊಂದು ಚೀಲದಲ್ಲಿ ಸುಮಾರು 15 ರಿಂದ 20 ಕೆಜಿ ತೂಕದಷ್ಟು ಬದನೆಕಾಯಿ ತುಂಬಿದ್ದು, ಅವುಗಳನ್ನು ಸ್ಥಳೀಯ ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು ಮೂಟೆಯೊಂದಕ್ಕೆ ₹ 20 ನೀಡಿ ಖರೀದಿ ಮಾಡಲು ಮುಂದಾಗಿದ್ದಾರೆ.

‘ರೈತನಿಗೆ ಕೆ.ಜಿಗೆ ₹ 1 ದೊರೆತ್ತಿದ್ದು, ಸರ್ಕಾರ ಇಂತಹ ಸಮಸ್ಯೆಗಳಿಗೆ ಸ್ಪಂದಿಸಿ ವಾರದ ಸಂತೆಗಳಲ್ಲಿ ರೈತರಿಗೆ ಅನುಕೂಲವಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರೈತರು ಬೆಳೆಯುವುದನ್ನೇ ನಿಲ್ಲಿಸಿ ಬೀದಿಪಾಲು ಅಗಬೇಕಾಗುತ್ತದೆ’ ಎಂದು ಲಕ್ಷ್ಮಿನಾರಾಯಣಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry