70 ಲಕ್ಷ ಉದ್ಯೋಗ

7

70 ಲಕ್ಷ ಉದ್ಯೋಗ

Published:
Updated:
70 ಲಕ್ಷ ಉದ್ಯೋಗ

ನವದೆಹಲಿ: ‘ಉದ್ಯೋಗ ಸೃಷ್ಟಿಗಾಗಿ ಕಳೆದ ಮೂರು ವರ್ಷಗಳಲ್ಲಿ ಕೈಗೊಂಡ ಕ್ರಮಗಳು ಈಗ ಫಲ ನೀಡತೊಡಗಿವೆ. ಈ ವರ್ಷ 70 ಲಕ್ಷ ಉದ್ಯೋಗ ನಿರ್ಮಾಣವಾಗಲಿದೆ’ ಎಂದು ಸಚಿವರು ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಕ್ರಮವನ್ನು ಮುಂದುವರಿಸುವಂತೆ, ಮುಂದಿನ ಮೂರು ವರ್ಷಗಳ ಅವಧಿಗೆ ಎಲ್ಲಾ ವಲಯಗಳಲ್ಲಿನ ಹೊಸ ಉದ್ಯೋಗಿಗಳ ಇಪಿಎಫ್‌ಗೆ ಸರ್ಕಾರವೇ ಶೇ 12ರಷ್ಟು ಕೊಡುಗೆ ನೀಡಲಿದೆ.

ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ ನೀಡಲೆಂದು ಪ್ರಧಾನಮಂತ್ರಿ ಕೌಶಲ ಕೇಂದ್ರ ಯೋಜನೆ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಮಾದರಿ ಕೌಶಲ ಕೇಂದ್ರವನ್ನು ಸರ್ಕಾರ ಸ್ಥಾಪಿಸುತ್ತಿದೆ. ಇವುಗಳ ಮೂಲಕ ತರಬೇತಿ ನೀಡಲು ಈವರೆಗೆ 306 ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ.

[related]

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry