ಅನುದಾನ ದುರುಪಯೋಗ: ಅಂಗವಿಕಲ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

7

ಅನುದಾನ ದುರುಪಯೋಗ: ಅಂಗವಿಕಲ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಬೆಂಗಳೂರು: ಸರ್ಕಾರದ ಅನುದಾನ ದುರುಪಯೋಗ ಮಾಡುತ್ತಿರುವ ಅಂಗವಿಕಲರಿಗೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಒತ್ತಾಯಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಗವಿಕಲ ಮಕ್ಕಳಿಗಾಗಿಯೇ ಸ್ಥಾಪನೆಗೊಂಡ ವಿದ್ಯಾರಣ್ಯ ಎಜುಕೇಷನ್‌ ಸೊಸೈಟಿಯಂತಹ ಹಲವು ಸಂಸ್ಥೆಗಳು ಬೇರೆ ಸಂಸ್ಥೆಗಳಿಂದ ಅಂಗವಿಕಲ ಮಕ್ಕಳನ್ನು ಕರೆಸಿಕೊಂಡು, ಇರುವ ಮಕ್ಕಳಿಗಿಂತ 3ರಿಂದ 4ಪಟ್ಟು ಹೆಚ್ಚು ತೋರಿಸಿ ಅನುದಾನ ಪಡೆಯುತ್ತಿವೆ’ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್‌. ನಾಗರಾಜ್‌ ಮಾತನಾಡಿ ‘ವಿದ್ಯಾರಣ್ಯ ಎಜುಕೇಷನ್‌ ಸೊಸೈಟಿಯ ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳನ್ನು ತನಿಖೆಗೆ ಒಳಪಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಸಂಸ್ಥೆಗೆ ನೀಡುತ್ತಿರುವ ಅನುದಾನ ನಿಲ್ಲಿಸಬೇಕು. ಹಲವು ಸಂಸ್ಥೆಗಳು ಅಂಗವಿಕಲರಿಗೆ ಕ್ರೀಡೆಗೆ ಪ್ರೋತ್ಸಾಹ ನೀಡುವ ಹೆಸರಿನಲ್ಲಿ ಹಣ ದುರುಪಯೋಗ ಮಾಡಿಕೊಳ್ಳುತ್ತಿವೆ. ಇಂತಹ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry