ಭಾನುವಾರ, ಮೇ 31, 2020
27 °C

ಸಹಪಾಠಿಗಳ ನಡುವಿನ ಗಲಾಟೆಯಲ್ಲಿ ವಿದ್ಯಾರ್ಥಿ ಸಾವು: ಮೂವರ ಬಂಧನ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸಹಪಾಠಿಗಳ ನಡುವಿನ ಗಲಾಟೆಯಲ್ಲಿ ವಿದ್ಯಾರ್ಥಿ ಸಾವು: ಮೂವರ ಬಂಧನ

ನವದೆಹಲಿ: ಇಲ್ಲಿನ ಕರವಾಲ್ ನಗರದ ಜೀವನ್‌ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದ್ದು, 14 ವರ್ಷದ ತುಷಾರ್‌ ಕುಮಾರ್‌ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. 

ಗುರವಾರ ಬೆಳಗ್ಗೆ ಶಾಲಾ ಶೌಚಾಲಯದಲ್ಲಿ ತುಷಾರ್‌ ಕುಮಾರ್‌ ಮೃತದೇಹ ಪತ್ತೆಯಾಗಿತ್ತು. ಇದನ್ನು ಕೊಲೆ ಎಂದು ವಿದ್ಯಾರ್ಥಿ ಪೋಷಕರು ಆರೋಪಿಸಿ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. 

‘ಮೃತ ವಿದ್ಯಾರ್ಥಿ ಇತರೆ ನಾಲ್ಕು ವಿದ್ಯಾರ್ಥಿಗಳ ಹೊಡೆದಾಟ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಸೆಕ್ಷನ್‌ 302, 304ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ’ ಎಂದು ಈಶಾನ್ಯ ವಿಭಾಗ ಪೊಲೀಸ್‌ ಉಪ ಆಯುಕ್ತ ಎ.ಕೆ ಸಿಂಗ್ಲಾ ಹೇಳಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ವಿದ್ಯಾರ್ಥಿ ಮೃತದೇಹದ ಮೇಲೆ ಯಾವುದೆ ಗಾಯದ ಗುರುತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದರು. ಆದರೆ, ಆದೇ ಶಾಲೆಯಲ್ಲಿ ಓದುತ್ತಿರುವ ಮೃತ ವಿದ್ಯಾರ್ಥಿಯ ಸಂಬಂಧಿ ರವಿ ‘ತುಷಾರ್‌ ಮೇಲೆ ಇತರೆ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದನ್ನು ನಾನು ನೋಡಿದೆ’ ಎಂದು ಹೇಳಿಕೆ ನೀಡಿದ್ದಾನೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಲಾ ಆಡಳಿತ ಮಂಡಳಿ, ‘ಅತಿಭೇದಿಯಿಂದ ವಿದ್ಯಾರ್ಥಿ ಬಳಲುತ್ತಿದ್ದ, ಆದರೆ ಪೋಷಕರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ. ಇಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ವಿದ್ಯಾರ್ಥಿಯ ಆರೋಗ್ಯ ಸರಿಯಿರಲಿಲ್ಲ. ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಕಂಡು ಬಂದ ಕೂಡಲೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ತಿಳಿಸಿತ್ತು.

‘ತುಷಾರ್‌ ಯಾವುದೆ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಆತನನ್ನು ಸಹವರ್ತಿ ವಿದ್ಯಾರ್ಥಿಗಳು ಥಳಿಸಿದ್ದನ್ನು ಶಿಕ್ಷಕರು ಕೂಡ ಗಮನಿಸುತ್ತಿದ್ದರು. ಜತೆಗೆ, ತುಷಾರ್‌ ಕುತ್ತಿಗೆ ಮತ್ತು ಎದೆ ಭಾಗದ ಮೇಲೆ ಗಾಯದ ಗುರುತುಗಳನ್ನು ನಾನು ನೋಡಿದೆ’ ಎಂದು ಸಂಬಂಧಿ ವಿದ್ಯಾರ್ಥಿ ರವಿ ಹೇಳಿಕೆ ನೀಡಿದ್ದಾನೆ.

ಘಟನೆಯನ್ನು ಖಂಡಿಸಿರುವ ವಿದ್ಯಾರ್ಥಿ ಪೋಷಕರು ಹಾಗೂ ಸ್ಥಳೀಯ ಶಾಸಕ ಕಪಿಲ್ ಮಿಶ್ರಾ ಶಾಲೆ ಎದುರು ಪ್ರತಿಭಟನೆ ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.