ಮರುನೇಮಕಾತಿಗೆ ಆಗ್ರಹಿಸಿ ಧರಣಿ

7

ಮರುನೇಮಕಾತಿಗೆ ಆಗ್ರಹಿಸಿ ಧರಣಿ

Published:
Updated:

ಮೈಸೂರು: ಕೆಲಸಕ್ಕೆ ಮರುನೇಮಕ ಮಾಡಿಕೊಂಡು ಹಿಂಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಸಂಪತ್‌ಕುಮಾರಿ ಎಂಬುವರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಏಕಾಂಗಿಯಾಗಿ ಧರಣಿ ನಡೆಸಿದರು.

ಜಯಲಕ್ಷ್ಮಿಪುರಂನ ಮಹಾಜನ ವಿದ್ಯಾಸಂಸ್ಥೆಯಲ್ಲಿ 1991ರಲ್ಲಿ ಕಚೇರಿ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ ಅವರು, ಸಂಸ್ಕೃತ ಹಾಗೂ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.

‘ನನಗಿಂತ ಕಡಿಮೆ ಅರ್ಹತೆ ಹೊಂದಿದವರಿಗೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಉದ್ದೇಶಪೂರ್ವಕವಾಗಿ ನನ್ನನ್ನು ಕೆಲಸದಿಂದ ವಜಾ ಮಾಡಿದೆ. ನ್ಯಾಯಾಲಯ ಕೂಡ ಮರುನೇಮಕಾತಿಗೆ ಹಾಗೂ ಹಿಂಬಾಕಿ ಪಾವತಿಗೆ ಆದೇಶಿಸಿದೆ. ಆದರೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಇದನ್ನು ಪಾಲಿಸಿಲ್ಲ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry