ಬುಧವಾರ, ಡಿಸೆಂಬರ್ 11, 2019
16 °C

ತೆರೆಯಲ್ಲಿ ಹೊಸ ಜೋಡಿಗಳು

Published:
Updated:
ತೆರೆಯಲ್ಲಿ ಹೊಸ  ಜೋಡಿಗಳು

* ಅಕ್ಷಯ್‌ ಕುಮಾರ್‌– ರಾಧಿಕಾ ಆಪ್ಟೆ

ತಮಿಳುನಾಡಿನ ಸಾಮಾಜಿಕ ಕಾರ್ಯಕರ್ತ ಅರುಣಾಚಲಂ ಮುರುಗನಾಥನ್‌ ಅವರ ಬದುಕನ್ನು ಆಧರಿಸಿದ ಸಿನಿಮಾ ‘ಪ್ಯಾಡ್‌ಮನ್‌’ನಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಕಥೆ ಬರೆದಿರುವ ನಿರ್ದೇಶಕ ಆರ್‌.ಬಲ್ಕಿ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಚಿತ್ರದಲ್ಲಿ ಈ ಜೋಡಿ ಗಂಡ–ಹೆಂಡತಿಯಾಗಿ ಕಾಣಿಸಿಕೊಂಡಿದ್ದು ಫೆಬ್ರುವರಿ 9ರಂದು ಚಿತ್ರ ತೆರೆ ಕಾಣಲಿದೆ.

* ರಣಬೀರ್‌ ಕಪೂರ್‌ –ದಿಯಾ ಮಿರ್ಜಾ‌

ಸಂಜಯ್‌ ದತ್‌ ಜೀವನವನ್ನಾಧರಿಸಿದ ಚಿತ್ರ ‘ಸಂಜು’ ಈಗಾಗಲೇ ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಚಿತ್ರ ಕೆಲಸ ಪೂರ್ಣಗೊಂಡಿದ್ದು ಮಾರ್ಚ್‌ 30ರಂದು ತೆರೆಗೆ ಬರಲಿದೆ. ರಣಬೀರ್‌ ಅವರು ಸಂಜಯ್‌ ದತ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ದತ್‌ ಅವರ ಪತ್ನಿ ಮಾನ್ಯತಾ ದತ್‌ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಳ್ಳುವರು. ಚಿತ್ರಕ್ಕೆ ರಾಜ್‌ಕುಮಾರ್‌ ಹಿರಾನಿ ನಿರ್ದೇಶಕನವಿದೆ.

* ಪ್ರಭಾಸ್‌– ಶ್ರದ್ಧಾ ಕಪೂರ್‌

ಸಾಹೊ ಚಿತ್ರದಲ್ಲಿ ಈ ಜೋಡಿ ಮೋಡಿ ಮಾಡುವ ನಿರೀಕ್ಷೆಯಿದೆ. ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಆಗಿರುವ ಇದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕ ಏಪ್ರಿಲ್‌ 20.

* ಟೈಗರ್‌ ಶ್ರಾಫ್‌– ದಿಶಾ ಪಟಾಣಿ

ಸಾಕಷ್ಟು ಸದ್ದು ಮಾಡಿದ ಜೋಡಿಹಕ್ಕಿಗಳಿವು. ಇವರಿಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಸಾಕಷ್ಟು ದಿನಗಳಲ್ಲಿ ಕೇಳಿ ಬರುತ್ತಲೇ ಇತ್ತು. ಈಗ ಇವರಿಬ್ಬರನ್ನು ತೆರೆಯ ಮೇಲೆ ಒಟ್ಟಿಗೆ ನೋಡುವ ಅವಕಾಶವನ್ನು ‘ಭಾಗಿ 2’ ಕಲ್ಪಿಸಿದೆ. ‘ಭಾಗಿ’ ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆಗಾ ಶ್ರದ್ಧಾ ಕಪೂರ್ ಬಣ್ಣ ಹಚ್ಚಿದ್ದರಹ. ಚಿತ್ರ ಏಪ್ರಿಲ್‌ 27ಕ್ಕೆ ತೆರೆ ಕಾಣಲಿದೆ.

* ವಿಕ್ಕಿ ಕೌಶಾಲ್‌– ಆಲಿಯಾ ಭಟ್‌

‘ರಮಣ್‌ ರಾಘವ್‌ 2.0’ ಹಾಗೂ ‘ಮಸಾನ್‌’ ಚಿತ್ರದ ಮೂಲಕ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ಕೌಶಾಲ್‌ ಈಗಾಗಲೇ ಹೆಸರು ಮಾಡಿರುವ ಆಲಿಯಾ ಭಟ್‌ ಜೊತೆ ‘ರಾಜಿ’ ಚಿತ್ರ ಮಾಡುತ್ತಿರುವುದು ಅನೇಕರಲ್ಲಿ ಕುತೂಹಲ ಮೂಡಿಸಿದೆ. ಮೇಘನಾ ಗುಲ್ಜಾರ್‌ ನಿರ್ದೇಶನದ ಈ ಚಿತ್ರದಲ್ಲಿ ಪತ್ತೇದಾರಿ ಮಹಿಳೆಯೊಬ್ಬಳು ಪಾಕಿಸ್ತಾನದ ಸೇನಾಧಿಕಾರಿಯನ್ನು ವಿವಾಹವಾಗುತ್ತಾರೆ. ಇವರಿಬ್ಬರ ನಡುವಿನ ಪ್ರೇಮ ಕಥಾನಕವೇ ಚಿತ್ರದ ಜೀವಾಳ. ಮೇ 11ರಂದು ಚಿತ್ರ ಬಿಡುಗಡೆ ಕಾಣುವ ನಿರೀಕ್ಷೆ ಇದೆ.

* ಅಕ್ಷಯ್‌ ಕುಮಾರ್‌ – ಮೌನಿ ರಾಯ್‌

ಟಿ.ವಿ. ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಮೇಲೆ ಮೌನಿ ರಾಯ್‌ ದೃಷ್ಟಿ ಸಿನಿಮಾದತ್ತ ಹೊರಳಿದೆ. ಗೋಲ್ಡ್‌ ಚಿತ್ರದಲ್ಲಿ ಅಕ್ಷಯ್‌ಕುಮಾರ್‌ಗೆ ಅವರು ಜೋಡಿ ಆಗಲಿದ್ದಾರೆ. ರೀಮಾ ಕಗ್ತಿ ನಿರ್ದೇಶನದ ಈ ಚಿತ್ರ ಕ್ರೀಡೆಗೆ ಸಂಬಂಧಿಸಿದೆ. ಮೊದಲ ಒಲಿಂಪಿಕ್‌ ಮೆಡಲ್‌ ಪಡೆದ ಭಾರತದ ತಂಡದಲ್ಲಿದ್ದ ಹಾಕಿ ಆಟಗಾರ ಬಲಬೀರ್‌ ಸಿಂಗ್‌ ಅವರ ಜೀವನವನ್ನಾಧರಿಸಿದ ಕಥೆ ಇದಾಗಿದೆ. ಆಗಸ್ಟ್‌ 15ರಂದು ಚಿತ್ರ ತೆರೆ ಕಾಣಲಿದೆ.

* ವರುಣ್‌– ಅನುಷ್ಕಾ

ವರುಣ್‌ ಧವನ್‌ ಹಾಗೂ ಅನುಷ್ಕಾ ಶರ್ಮಾ ಬಾಲಿವುಡ್‌ ಸಿನಿಮಾ ಜಗತ್ತಿಗೆ ಬಂದು ವರ್ಷಗಳೇ ಕಳೆದಿವೆ. ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಮಿಗಳ ಮನದಲ್ಲಿ ಜಾಗ ಗಳಿಸಿದ್ದಾರೆ. ಇದೀಗ ಈ ಜೋಡಿ ‘ಸುಯ್‌ ದಾಗ್‌’ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲಿದೆ. ಯಶ್‌ರಾಜ್ ಫಿಲ್ಮ್ಸ್ ಬ್ಯಾನರ್‌ ಅಡಿಯಲ್ಲಿ ಸಿದ್ಧವಾಗುತ್ತಿರುವ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆ ಕಾಣಲಿದೆ.

*ಸುಶಾಂತ್‌ ಸಿಂಗ್‌ ರಜಪೂತ್‌– ಸಾರಾ ಅಲಿ ಖಾನ್‌

ಸೈಫ್‌ ಅಲಿ ಖಾನ್‌ ಅವರ ಮಗಳು ಸಾರಾಳ ಮೊದಲ ಚಿತ್ರ ಎನ್ನುವ ಕಾರಣಕ್ಕೆ ‘ಕೇದಾರನಾಥ್‌’ ಕುತೂಹಲ ಹುಟ್ಟಿಸಿದೆ. ಜೊತೆಗೆ ಈ ಜೋಡಿಯನ್ನೂ ನೋಡಲು ಸಿನಿ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಷೇಕ್‌ ಕಪೂರ್‌ ಚಿತ್ರವನ್ನು ನಿರ್ದೇಶಿಸಿದ್ದಾರೆ. ಡಿ.21ರಂದು ಚಿತ್ರ ಬಿಡುಗಡೆಯಾಗಲಿದ್ದು ಶಾರುಖ್‌ ಖಾನ್‌ ಅವರ ‘ಜೀರೊ’ ಚಿತ್ರ ಕೂಡ ಅಂದೇ ಬಿಡುಗಡೆ ಆಗುವ ನಿರೀಕ್ಷೆ ಇದೆ.

* ರಣವೀರ್‌ ಸಿಂಗ್‌ – ಆಲಿಯಾ ಭಟ್‌

ಜಾಹೀರಾತುಗಳಲ್ಲಿ ಈ ಜೋಡಿಯನ್ನು ನೋಡಿದ್ದೆವು. ಆದರೆ ಇದೀಗ ‘ಗುಲ್ಲಿ ಬಾಯ್‌’ ಚಿತ್ರದ ಮೂಲಕ ಇವರಿಬ್ಬರು ಮೋಡಿ ಮಾಡಲಿದ್ದಾರೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇಬ್ಬರೂ ಬೆಳ್ಳಿತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದೇ ಅನೇಕರು ಬೆರಗುಗಣ್ಣಿನಿಂದ ಕಾಯುವಂತೆ ಮಾಡಿದೆ. ಜೋಯಾ ಅಖ್ತರ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಮುಂಬೈನ ಬೀದಿ ಬದಿಯ ದುರ್ಬಲ ವರ್ಗದ ವ್ಯಕ್ತಿಯೊಬ್ಬ ರ‍್ಯಾಪರ್‌ ಆಗಿ ಬೆಳೆಯುವ ಪಾತ್ರದಲ್ಲಿ ರಣವೀರ್‌ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಪ್ರತಿಕ್ರಿಯಿಸಿ (+)