ಭಾನುವಾರ, ಡಿಸೆಂಬರ್ 8, 2019
25 °C

ವಿವಿಐಪಿ ವಿಮಾನಯಾನಕ್ಕೆ ಕ್ಷಿಪಣಿ ನಿರೋಧಕ ಬೋಯಿಂಗ್ 777-300 ಇಆರ್; ಖರ್ಚು ₹4,469.50 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಐಪಿ ವಿಮಾನಯಾನಕ್ಕೆ ಕ್ಷಿಪಣಿ ನಿರೋಧಕ ಬೋಯಿಂಗ್ 777-300 ಇಆರ್; ಖರ್ಚು ₹4,469.50 ಕೋಟಿ!

ನವದೆಹಲಿ: ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ ಮೊದಲಾದ ವಿವಿಐಪಿಗಳ ವಿದೇಶ ಪ್ರಯಾಣಗಳಿಗಾಗಿ ಬೋಯಿಂಗ್ ಕಂಪನಿಯ ಎರಡು ಹೊಸ ವಿಮಾನಗಳನ್ನು ಖರೀದಿಸಲು ಕೇಂದ್ರ ಬಜೆಟ್‍ನಲ್ಲಿ ಮೀಸಲಿರಿಸಿದ್ದು ₹4,469.50 ಕೋಟಿ! ಅಮೆರಿಕದ ಕಂಪನಿ ಬೋಯಿಂಗ್‍ನ 777-300 ಇಆರ್ ಮಾಡೆಲ್ ವಿಮಾನಗಳನ್ನು ಭಾರತ ಖರೀದಿಸಲಿದ್ದು, ಈ ವಿಮಾನಗಳು ಕ್ಷಿಪಣಿ ನಿರೋಧಕ ತಂತ್ರಜ್ಞಾನದಿಂದ ಕೂಡಿದವುಗಳಾಗಿವೆ.

ಸದ್ಯ ವಿವಿಐಪಿಗಳು ಬಳಸುತ್ತಿರುವ ಬೋಯಿಂಗ್ 747-400 ಮಾಡೆಲ್ ವಿಮಾನ (ಏರ್ ಇಂಡಿಯಾ ಒನ್) ಹಳತಾಗಿದ್ದರಿಂದ ಹೊಸ ವಿಮಾನಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ನೂತನ ಸುರಕ್ಷಾ ಕವಚ, ಶಕ್ತಿಶಾಲಿ ಎಂಜಿನ್‍ ಇರುವ ವಿಮಾನದಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲಾಗುವುದು.

ಬಜೆಟ್‍ನಲ್ಲಿ  ಕೇಂದ್ರ ವಾಯುಯಾನ ವಲಯಕ್ಕೆ ನೀಡಿದ ಒಟ್ಟು ಮೊತ್ತದ ಮೂರರಲ್ಲಿ ಎರಡನೇ ಭಾಗದಷ್ಟು ಮೊತ್ತವನ್ನು ವಿಐಪಿ ವಿಮಾನ ಖರೀದಿಸಲು ಖರ್ಚು ಮಾಡಲಾಗುತ್ತದೆ. ಒಟ್ಟು ₹6,602.86 ಕೋಟಿ ಮೊತ್ತವನ್ನು ವಾಯುಯಾನ ವಲಯಕ್ಕೆ ನೀಡಲಾಗಿದೆ. ಕಳೆದ ವರ್ಷ ಈ ವಲಯಕ್ಕೆ ₹2,710 ಕೋಟಿ ನೀಡಲಾಗಿತ್ತು.

ವಿವಿಐಪಿಗಳಿಗಾಗಿರುವ ಅತ್ಯಾಧುನಿಕ ಬೋಯಿಂಗ್ ವಿಮಾನಗಳು ಮುಂದಿನ ವರ್ಷಾರಂಭದಲ್ಲಿ ಭಾರತಕ್ಕೆ ತಲುಪಲಿದೆ. ಮಾರ್ಚ್ ತಿಂಗಳ ಮುನ್ನ ಬೋಯಿಂಗ್ 777-330 ವಿಮಾನಗಳು ಏರ್ ಇಂಡಿಯಾಗೆ ಲಭಿಸಲಿದೆ. ಇದರಲ್ಲಿ ಎರಡು ವಿಮಾನಗಳನ್ನು ವಿವಿಐಪಿಗಳ ಪ್ರಯಾಣಕ್ಕಾಗಿ ಬಳಸಲಾಗುವುದು. ಸದ್ಯ ಬಳಕೆಯಾಗುತ್ತಿರುವ ಜಂಬೋ ಜೆಟ್‍ಗಳು 25 ವರ್ಷ ಹಳೆಯದ್ದಾಗಿದೆ.

ಪ್ರತಿಕ್ರಿಯಿಸಿ (+)