ಬುಧವಾರ, ಡಿಸೆಂಬರ್ 11, 2019
16 °C

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌: ಭಾರತಕ್ಕೆ 217 ರನ್ ಗುರಿ

Published:
Updated:
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌: ಭಾರತಕ್ಕೆ 217 ರನ್ ಗುರಿ

ಮೌಂಟ್‌ ಮೌಂಗನೂಯಿ, ನ್ಯೂಜಿಲೆಂಡ್‌: ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 47.2 ಓವರ್‌ಗಳಲ್ಲಿ 216 ರನ್‌ಗಳಿಗೆ ಆಲ್‌ಔಟ್ ಆಗಿದೆ.

ಇದರೊಂದಿಗೆ, ಚಾಂಪಿಯನ್ ಆಗಿ ಹೊರಹೊಮ್ಮಲು ಭಾರತ ತಂಡ 217 ರನ್ ಗಳಿಸಬೇಕಿದೆ. ಟಾಸ್ ಗೆದ್ದು ಬ್ಯಾಂಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ ಜೊನಾಥನ್ ಮೆರ್ಲೊ (102 ಎಸೆತಗಳಲ್ಲಿ 76) ಅರ್ಧಶತಕ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು.

ಭಾರತದ ಪರ ಉತ್ತಮ ಬೌಲಿಂಗ್ ನಡೆಸಿದ ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ ಮತ್ತು ಅನುಕುಲ್ ರಾಯ್ ತಲಾ 2 ವಿಕೆಟ್ ಪಡೆದು ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸುವುದನ್ನು ತಡೆಯಲು ನೆರವಾದರು.

ಪೃಥ್ವಿ ಶಾ ನಾಯಕತ್ವದ ಭಾರತ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 131 ರನ್‌ಗಳಿಂದ ಮತ್ತು ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು 203 ರನ್‌ಗಳಿಂದ ಮಣಿಸಿತ್ತು.

ಪ್ರತಿಕ್ರಿಯಿಸಿ (+)