ಗುರುವಾರ , ಡಿಸೆಂಬರ್ 12, 2019
26 °C

ಪ್ರಧಾನಿ ಕಾರ್ಯಕ್ರಮದ ವೇಳೆ ಪಕೋಡಾ ಮಾರಲು ಅನುಮತಿ ಕೇಳಿದ ವಿದ್ಯಾರ್ಥಿ ಒಕ್ಕೂಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಕಾರ್ಯಕ್ರಮದ ವೇಳೆ ಪಕೋಡಾ ಮಾರಲು ಅನುಮತಿ ಕೇಳಿದ ವಿದ್ಯಾರ್ಥಿ ಒಕ್ಕೂಟ!

ಬೆಂಗಳೂರು: ಭಾನುವಾರ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಪಕೋಡಾ ಮಾರಲು ವಿದ್ಯಾರ್ಥಿಗಳ ಒಕ್ಕೂಟ ಅನುಮತಿ ಕೇಳಿರುವ ಕುರಿತು ಸಂಸದ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್‌ಎಸ್‌ಯುಐ)ವು ಪ್ರಧಾನಿ ಕಾರ್ಯಕ್ರಮದ ವೇಳೆ ಪಕೋಡಾ ಮಾರಲು ಅನುಮತಿ ಕೇಳಿರುವುದಾಗಿ ಟ್ವೀಟ್‌ ಮಾಡಿರುವ ಪ್ರತಾಪ್‌ ಸಿಂಹ, ‘ಪಕೋಡನಾದ್ರು ಮಾರಿ, ಬಜ್ಜಿ ಬೋಂಡನಾದ್ರು ಮಾರಿ. ಆದರೆ ದೇಶ ಮಾರೋಕೆ ಮಾತ್ರ ಕಾಂಗ್ರೆಸ್‌ಗೆ ನಾವು ಬಿಡೋಲ್ಲ’ ಎಂದು ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆ.1ರಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದ ಟ್ವೀಟಿಗರು ’ಪಕೋಡಾ ಬಜೆಟ್‌’ ಎಂದು ಕರೆದಿದ್ದು ಟ್ರೆಂಡ್‌ ಸೃಷ್ಟಿಸಿತ್ತು.

ಈ ಹಿಂದೆ ಪ್ರಧಾನಿ ಮೋದಿ ಉದ್ಯೋಗ ಹಾಗೂ ವ್ಯಾಪಾರವನ್ನು ಸಮೀಕರಿಸಿ ಪಕೋಡಾ ಮಾರಾಟ ಕುರಿತು ಪ್ರಸ್ತಾಪಿಸಿದ್ದರು. ಇದಕ್ಕೆ ರಾಷ್ಟ್ರದಲ್ಲಿ ಅನೇಕರಿಂದ ವಿರೋಧ ಹಾಗೂ ಟೀಕೆ ವ್ಯಕ್ತವಾಗಿತ್ತು.

ಇನ್ನಷ್ಟು ಓದು:

ಪಕೋಡಾ ಮಾರಿ ₹200 ಗಳಿಸುವುದು ಉದ್ಯೋಗ ಅಲ್ಲ, ಅದು ಹೊಟ್ಟೆಪಾಡು!

ಟ್ವಿಟರ್‌ನಲ್ಲಿ ‘ಪಕೋಡಾ ಬಜೆಟ್‌’ ಟ್ರೆಂಡ್‌

ಪ್ರತಿಕ್ರಿಯಿಸಿ (+)