ಶುಕ್ರವಾರ, ಡಿಸೆಂಬರ್ 6, 2019
26 °C

ಐಪಿಎಲ್‌ ಹತ್ತು: ನೆನಪುಗಳ ಸುತ್ತು

Published:
Updated:
ಐಪಿಎಲ್‌ ಹತ್ತು: ನೆನಪುಗಳ ಸುತ್ತು

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಮಂಡಳಿ ಬಿಸಿಸಿಐನ ಕನಸಿನ ಕೂಸು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌). ಟ್ವೆಂಟಿ–20 ಮಾದರಿಯ ಈ ಲೀಗ್‌ ಈಗ 11ನೇ ವಸಂತಕ್ಕೆ ಕಾಲಿಟ್ಟಿದೆ. ಭಾರತದ ಕ್ರೀಡಾ ಲೋಕದಲ್ಲಿ ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದ ಈ ಲೀಗ್‌ ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಹಿಂದಿನ 10 ಆವೃತ್ತಿಗಳಲ್ಲಿ ಐಪಿಎಲ್‌ ಮಾಡಿದ ಮೋಡಿ ಇದಕ್ಕೆ ಒಂದು ನಿದರ್ಶನ.

ಭಾರತೀಯ ಕ್ರಿಕೆಟ್‌ನಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿರುವ ಈ ಲೀಗ್‌ನಿಂದ ಅನೇಕ ಆಟಗಾರರು ಕುಬೇರರಾಗಿದ್ದಾರೆ. ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ನ ಕಳಂಕವೂ ಇದಕ್ಕೆ ಮೆತ್ತಿಕೊಂಡಿದೆ. ಲೀಗ್‌ನಲ್ಲಿ ಇದುವರೆಗೂ ಆಡಿದ ತಂಡಗಳು, ಹಿಂದಿನ ಚಾಂಪಿಯನ್ನರು, ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರರು ಹೀಗೆ ಹಲವು ವಿಷಯಗಳ ಕುರಿತು ಇಲ್ಲಿವೆ ಮಾಹಿತಿಗಳು. 

***

ಐಪಿಎಲ್‌ನಲ್ಲಿ ಆಡಿದ ತಂಡಗಳು

* 2008 -ಐಪಿಎಲ್‌ಗೆ ಚಾಲನೆ ನೀಡಿದ ವರ್ಷ

* 3 -ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಗೆದ್ದಿರುವ ಟ್ರೋಫಿಗಳು. ಈ ತಂಡ ಹೆಚ್ಚು ಬಾರಿ ಚಾಂಪಿಯನ್‌ ಆದ ಹೆಗ್ಗಳಿಕೆ ಹೊಂದಿದೆ.

* 8- ಲೀಗ್‌ನಲ್ಲಿ ಆಡುವ ತಂಡಗಳು

***

ಮಾದರಿ

ಡಬಲ್‌ ರೌಂಡ್‌ ರಾಬಿನ್‌ ಲೀಗ್‌ ಮತ್ತು ‘ಪ್ಲೇ ಆಫ್‌’ ಮಾದರಿಯಲ್ಲಿ ಐಪಿಎಲ್‌ ಟೂರ್ನಿಯ ಪಂದ್ಯಗಳು ನಡೆಯುತ್ತವೆ.

***

ಯೂ ಟೂಬ್‌ನಲ್ಲೂ ಐ‍ಪಿಎಲ್‌

2010ರಲ್ಲಿ ಐಪಿಎಲ್‌ ಪಂದ್ಯಗಳನ್ನು ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗಿತ್ತು. ಲೀಗ್‌ವೊಂದು ಯೂ ಟ್ಯೂಬ್‌ನಲ್ಲಿ ಪ್ರಸಾರವಾಗಿದ್ದು ಕ್ರೀಡಾಲೋಕದ ಇತಿಹಾಸದಲ್ಲೇ ಮೊದಲು.

*

ಐಪಿಎಲ್‌ನಲ್ಲಿ ಆಡಲಿರುವ ಪ್ರಸ್ತುತ ತಂಡಗಳು

ಚೆನ್ನೈ ಸೂಪರ್‌ ಕಿಂಗ್ಸ್‌

ಸೇರ್ಪಡೆ: 2008

ಕೋಚ್‌: ಸ್ಟೀಫನ್‌ ಪ್ಲೆಮಿಂಗ್‌

**

ಡೆಲ್ಲಿ ಡೇರ್‌ಡೆವಿಲ್ಸ್‌

ಸೇರ್ಪಡೆ: 2008

ಕೋಚ್‌: ರಿಕಿ ಪಾಂಟಿಂಗ್‌

***

ಕಿಂಗ್ಸ್‌ ಇಲೆವನ್‌ ಪಂಜಾಬ್‌

ಸೇರ್ಪಡೆ: 2008

ಕೋಚ್‌: ಬ್ರಾಡ್ ಹಾಡ್ಜ್‌.

***

ಕೋಲ್ಕತ್ತ ನೈಟ್‌ ರೈಡರ್ಸ್‌

ಸೇರ್ಪಡೆ: 2008

ಕೋಚ್‌: ಜಾಕ್‌ ಕಾಲಿಸ್‌.

**

ಮುಂಬೈ ಇಂಡಿಯನ್ಸ್‌

ಸೇರ್ಪಡೆ: 2008

ಕೋಚ್‌: ಮಾಹೇಲ ಜಯವರ್ಧನೆ

**

ರಾಜಸ್ಥಾನ ರಾಯಲ್ಸ್‌

ಸೇರ್ಪಡೆ: 2008

ಕೋಚ್‌: ಜುಬಿನ್‌ ಭರುಚಾ

**

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಸೇರ್ಪಡೆ: 2008

ಕೋಚ್‌: ಡೇನಿಯಲ್‌ ವೆಟೋರಿ.

**

ಸನ್‌ರೈಸರ್ಸ್‌ ಹೈದರಾಬಾದ್‌

ಸೇರ್ಪಡೆ: 2012

ಕೋಚ್‌: ಟಾಮ್‌ ಮೂಡಿ.

***********

ಈ ಹಿಂದೆ ಲೀಗ್‌ನಲ್ಲಿ ಆಡಿದ ತಂಡಗಳು

ಡೆಕ್ಕನ್‌ ಚಾರ್ಜರ್ಸ್‌ (2008– 2012)

**

ಕೊಚ್ಚಿ ಟಸ್ಕರ್ಸ್‌ ಕೇರಳ(2010–2011)

**

ಪುಣೆ ವಾರಿಯರ್ಸ್‌ ಇಂಡಿಯಾ(2010–2013)

**

ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌(2015–2017)

***

ಗುಜರಾತ್‌ ಲಯನ್ಸ್‌(2015–2017)

******

ಹಿಂದಿನ ಚಾಂಪಿಯನ್ನರು

ರಾಜಸ್ಥಾನ ರಾಯಲ್ಸ್‌

ವರ್ಷ: 2008

**

ಡೆಕ್ಕನ್ ಚಾರ್ಜರ್ಸ್‌

ವರ್ಷ: 2009

***

ಚೆನ್ನೈ ಸೂಪರ್‌ಕಿಂಗ್ಸ್‌

ವರ್ಷ: 2010

**

ಚೆನ್ನೈ ಸೂಪರ್‌ ಕಿಂಗ್ಸ್‌

ವರ್ಷ: 2011

***

ಕೋಲ್ಕತ್ತ ನೈಟ್‌ ರೈಡರ್ಸ್‌

ವರ್ಷ: 2012

***

ಮುಂಬೈ ಇಂಡಿಯನ್ಸ್‌

ವರ್ಷ: 2013

***

ಕೋಲ್ಕತ್ತ ನೈಟ್‌ ರೈಡರ್ಸ್

ವರ್ಷ: 2014

***

ಮುಂಬೈ ಇಂಡಿಯನ್ಸ್‌

ವರ್ಷ: 2015

***

ಸನ್‌ರೈಸರ್ಸ್‌ ಹೈದರಾಬಾದ್‌

ವರ್ಷ: 2016

****

ಮುಂಬೈ ಇಂಡಿಯನ್ಸ್‌

ವರ್ಷ: 2017

*********

ಬಹುಮಾನ ಮೊತ್ತ

ಒಟ್ಟು: ₹ 40 ಕೋಟಿ

ಚಾಂಪಿಯನ್‌: ₹ 15 ಕೋಟಿ

ರನ್ನರ್ಸ್‌ ಅಪ್‌: ₹ 10 ಕೋಟಿ

ಮೂರು ಮತ್ತು ನಾಲ್ಕನೇ ಸ್ಥಾನ: ತಲಾ ₹ 7.5 ಕೋಟಿ

******

ಆರೆಂಜ್‌ ಕ್ಯಾಪ್‌ (₹ 10 ಲಕ್ಷ ಬಹುಮಾನ ಮತ್ತು ಟ್ರೋಫಿ)

ಐಪಿಎಲ್‌ನ ಋತುವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸುವ ಬ್ಯಾಟ್ಸ್‌ಮನ್‌ಗೆ ಬಿಸಿಸಿಐ ಈ ಪ್ರಶಸ್ತಿ ನೀಡುತ್ತದೆ.

**

ಪರ್ಪಲ್‌ ಕ್ಯಾಪ್‌ (₹ 10 ಲಕ್ಷ ಬಹುಮಾನ ಮತ್ತು ಟ್ರೋಫಿ)

ಋತುವೊಂದರಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆಯುವ ಬೌಲರ್‌ಗೆ ಈ ಗೌರವ ಒಲಿಯುತ್ತದೆ.

****

ಪ್ರಮುಖ ಪ್ರಶಸ್ತಿಗಳು

*ಪಿಚ್‌ ಮತ್ತು ಮೈದಾನ ಪ್ರಶಸ್ತಿ (₹ 50 ಲಕ್ಷ ಮತ್ತು ಟ್ರೋಫಿ)


ಐಪಿಎಲ್‌ ಋತುವೊಂದರ ವೇಳೆ ಉತ್ತಮ ಗುಣಮಟ್ಟದ ಪಿಚ್‌ ಸಿದ್ಧಪಡಿಸಿದ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಬಿಸಿಸಿಐ ನೀಡುವ ಗೌರವ.

* ಪರ್ಪೆಕ್ಟ್‌ ಕ್ಯಾಚ್‌ ಆಫ್‌ ದಿ ಸೀಸನ್‌ (₹ 10 ಲಕ್ಷ ಬಹುಮಾನ, ಟ್ರೋಫಿ ಮತ್ತು ವಿವೊ ಮೊಬೈಲ್‌).

ಅತ್ಯುತ್ತಮ ಕ್ಯಾಚ್‌ ಹಿಡಿಯುವ ಆಟಗಾರನಿಗೆ ಸಿಗುವ ಪ್ರಶಸ್ತಿ

*ಮ್ಯಾಕ್ಸಿಮಮ್‌ ಸೀಸನ್‌ ಅವಾರ್ಡ್‌ (₹ 10 ಲಕ್ಷ ಮತ್ತು ಟ್ರೋಫಿ)

ಅತಿ ಹೆಚ್ಚು ಸಿಕ್ಸರ್‌ ಬಾರಿಸಿದವರಿಗೆ ನೀಡುವ ಗೌರವ.

*ಸೂಪರ್‌ಫಾಸ್ಟ್‌ ಫಿಫ್ಟಿ ಅವಾರ್ಡ್‌ (₹ 10 ಲಕ್ಷ ಮತ್ತು ಟ್ರೋಫಿ)

ಅತಿ ವೇಗವಾಗಿ ಅರ್ಧಶತಕ ಗಳಿಸುವ ಆಟಗಾರನಿಗೆ ಕೊಡುವ ಪ್ರಶಸ್ತಿ

*ಗ್ಲಾಮ್‌ ಶಾಟ್‌ ಆಫ್‌ ದಿ ಸೀಸನ್‌ (₹ 10 ಲಕ್ಷ ನಗದು, ಟ್ರೋಫಿ ಮತ್ತು ವಿಟಾರ ಬ್ರೆಜಾ ಕಾರು)

ಮಹಮೋಹಕ ಹೊಡೆತ ಬಾರಿಸುವ ಆಟಗಾರನಿಗೆ ಸಿಗುವ ಪ್ರಶಸ್ತಿ. ಈ  ಅಭಿಮಾನಿಗಳು ಮತ್ತು ವೀಕ್ಷಕ ವಿವರಣೆಗಾರರು ಮತ ಹಾಕಿ ಪ್ರಶಸ್ತಿಗೆ ಸೂಕ್ತ ಆಟಗಾರನನ್ನು ಆಯ್ಕೆ ಮಾಡುತ್ತಾರೆ.

*ಸ್ಟೈಲಿಸ್‌ ಪ್ಲೇಯರ್‌ ಆಫ್‌ ದಿ ಸೀಸನ್‌ (₹ 10 ಲಕ್ಷ ನಗದು ಮತ್ತು ಟ್ರೋಫಿ)

ಆಟಗಾರರ ಸಾಮರ್ಥ್ಯ ಮತ್ತು ಬ್ಯಾಟಿಂಗ್‌ ಶೈಲಿಯ ಆಧಾರದಲ್ಲಿ ಪ್ತರತಿ ಪಂದ್ಯದಲ್ಲೂ ವೀಕ್ಷಕ ವಿವರಣೆಗಾರರು ಪಾಯಿಂಟ್‌ ನೀಡಲಿದ್ದು. ಋತುವಿನಲ್ಲಿ ಹೆಚ್ಚು ಪಾಯಿಂಟ್ಸ್‌ ಪಡೆಯುವ ಆಟಗಾರನಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

*ಉದಯೋನ್ಮುಖ ಆಟಗಾರ ಪ್ರಶಸ್ತಿ (₹ 10 ಲಕ್ಷ ನಗದು ಬಹುಮಾನ)

*ಫೇರ್‌ ಪ್ಲೇ ಪ್ರಶಸ್ತಿ (ಟ್ರೋಫಿ)

*ಟೂರ್ನಿಯ ಮೌಲ್ಯಯುತ ಆಟಗಾರ.

*******

ಐಪಿಎಲ್‌ನ ಟೈಟಲ್‌ ಪ್ರಯೋಜಕತ್ವ ಪಡೆದವರು

ಪ್ರಾಯೋಜಕರು,ಅವಧಿ,ಮೊತ್ತ (ವರ್ಷಕ್ಕೆ)

ಡಿಎಲ್‌ಎಫ್‌,2008–2012,₹ 40 ಕೋಟಿ

ಪೆಪ್ಸಿ,2013–2015,₹79.2 ಕೋಟಿ

ವಿವೊ,2017–2018,₹ 100 ಕೋಟಿ

ವಿವೊ,2018–2022,₹439.8 ಕೋಟಿ

****

ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ಆಟಗಾರರು

ವರ್ಷ: 2008

ಮಹೇಂದ್ರ ಸಿಂಗ್‌ ದೋನಿ

ಮೊತ್ತ: ₹ 6 ಕೋಟಿ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

***

ಕೆವಿನ್‌ ಪೀಟರ್ಸನ್‌

ವರ್ಷ: 2009

ತಂಡ: ಆರ್‌ಸಿಬಿ

ಆ್ಯಂಡ್ರ್ಯೂ ಫ್ಲಿಂಟಾಫ್‌

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಮೊತ್ತ: ಇಬ್ಬರಿಗೂ ತಲಾ ₹ 7.2 ಕೋಟಿ

***

ವರ್ಷ: 2010

ಕೀರನ್‌ ಪೊಲಾರ್ಡ್‌

ತಂಡ: ಮುಂಬೈ ಇಂಡಿಯನ್ಸ್‌

ಶೇನ್‌ ಬಾಂಡ್‌

ತಂಡ: ಕೋಲ್ಕತ್ತ ನೈಟ್‌ ರೈಡರ್ಸ್‌

ಮೊತ್ತ: ಇಬ್ಬರಿಗೂ ₹ 3.5 ಕೋಟಿ

***

ವರ್ಷ: 2011

ಗೌತಮ್‌ ಗಂಭೀರ್‌

ಮೊತ್ತ: ₹ 11.4 ಕೋಟಿ

ತಂಡ: ಕೋಲ್ಕತ್ತ ನೈಟ್‌ ರೈಡರ್ಸ್‌

****

ವರ್ಷ: 2012

ರವೀಂದ್ರ ಜಡೇಜ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಮೊತ್ತ: ₹9.72 ಕೋಟಿ

********

ವರ್ಷ: 2013

ಗ್ಲೆನ್‌ ಮ್ಯಾಕ್ಸ್‌ವೆಲ್‌

ತಂಡ: ಮುಂಬೈ ಇಂಡಿಯನ್ಸ್‌

ಮೊತ್ತ: ₹ 6.5 ಕೋಟಿ

*****

ವರ್ಷ: 2014

ಯುವರಾಜ್‌ ಸಿಂಗ್‌

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಮೊತ್ತ: ₹ 14 ಕೋಟಿ

**

ವರ್ಷ: 2015

ಯುವರಾಜ್‌ ಸಿಂಗ್‌

ತಂಡ: ಡೆಲ್ಲಿ ಡೇರ್‌ಡೆವಿಲ್ಸ್‌

ಮೊತ್ತ: ₹ 16 ಕೋಟಿ

**

ವರ್ಷ: 2016

ಶೇನ್‌ ವಾಟ್ಸನ್‌

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಮೊತ್ತ: ₹ 9.5 ಕೋಟಿ

*****

ವರ್ಷ: 2017

ಬೆನ್‌ ಸ್ಟೋಕ್ಸ್‌

ತಂಡ: ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌

ಮೊತ್ತ: ₹ 14.5 ಕೋಟಿ

***

ವರ್ಷ: 2018

ಬೆನ್‌ ಸ್ಟೋಕ್ಸ್‌

ತಂಡ: ರಾಜಸ್ಥಾನ ರಾಯಲ್ಸ್‌

ಮೊತ್ತ: ₹ 12.5 ಕೋಟಿ.

**

ವರ್ಷ: 2018

ವಿರಾಟ್‌ ಕೊಹ್ಲಿ


ಮೊತ್ತ: ₹ 17 ಕೋಟಿ

ತಂಡ: ಆರ್‌ಸಿಬಿ

(ಆಟಗಾರರ ಉಳಿಕೆ ಪ್ರಕ್ರಿಯೆ ವೇಳೆ ಆರ್‌ಸಿಬಿ, ವಿರಾಟ್‌ಗೆ ಐಪಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ನೀಡಿದೆ).

********

ಗರಿಷ್ಠ ರನ್‌ ಸಾಧಕ

ಸುರೇಶ್‌ ರೈನಾ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಲಯನ್ಸ್‌

ಪಂದ್ಯ: 161

ಒಟ್ಟು ರನ್‌: 4540

ಗರಿಷ್ಠ: 100*

ಶತಕ: 1

ಅರ್ಧಶತಕ: 31

*******

ಗರಿಷ್ಠ ವಿಕೆಟ್‌ ಸಾಧನೆ

ಲಸಿತ್‌ ಮಾಲಿಂಗ

ತಂಡ: ಮುಂಬೈ ಇಂಡಿಯನ್ಸ್‌

ಪಂದ್ಯ: 110

ವಿಕೆಟ್‌: 154

ಉತ್ತಮ: 13ಕ್ಕೆ5

ಸರಾಸರಿ: 19.01.

ವಿವಾದಗಳ ಸುತ್ತ

ಹರಭಜನ್‌–ಶ್ರೀಶಾಂತ್‌ ಪ್ರಕರಣ: ಚೊಚ್ಚಲ ಆವೃತ್ತಿಯ ಲೀಗ್‌ನ ಪಂದ್ಯದ ವೇಳೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹರಭಜನ್‌ ಸಿಂಗ್‌, ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಬೌಲರ್‌ ಎಸ್‌.ಶ್ರೀಶಾಂತ್‌, ಕಪಾಳಕ್ಕೆ ಹೊಡೆದಿದ್ದು ದೊಡ್ಡ ವಿವಾದವಾಗಿತ್ತು.

ಲಲಿತ್‌ ಮೋದಿ ಮೇಲೆ ಆಜೀವ ನಿಷೇಧ: 2007 ಸೆಪ್ಟೆಂಬರ್‌ 13ರಂದು ಬಿಸಿಸಿಐ ಐಪಿಎಲ್‌ ಟ್ವೆಂಟಿ–20 ಲೀಗ್‌  ಆರಂಭಿಸುವ ವಿಷಯ ಬಹಿರಂಗಗೊಳಿಸಿತ್ತು. ಆಗ ಬಿಸಿಸಿಐ ಉಪಾಧ್ಯಕ್ಷರಾಗಿದ್ದ ಲಲಿತ್‌ ಮೋದಿ, ಲೀಗ್‌ನ ರೂಪುರೇಷೆಗಳ ಕುರಿ‌ತು ಮಾಹಿತಿ ನೀಡಿದ್ದರು. ಲಲಿತ್‌, ಬಿಸಿಸಿಐ ಹಾಗೂ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ ಗೊತ್ತಿಲ್ಲದಂತೆ ಲಂಡನ್‌ನಲ್ಲಿ ಐಪಿಎಲ್‌ಗೆ ಪರ್ಯಾಯ ಲೀಗ್‌ವೊಂದನ್ನು ನಡೆಸಲು ನಿರ್ಧರಿಸಿದ್ದರು. ಹೀಗಾಗಿ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದಡಿ ಅವರನ್ನು ಬಿಸಿಸಿಐ 2010ರಲ್ಲಿ ಅಮಾನತು ಮಾಡಿತ್ತು. ಸೆಪ್ಟೆಂಬರ್‌ 2013ರಂದು ಮೋದಿ ಮೇಲೆ ಆಜೀವ ನಿಷೇಧ ಹೇರುವ ತೀರ್ಮಾನ ಕೈಗೊಳ್ಳಲಾಗಿತ್ತು.

ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಕರಿನೆರಳು: 2013ರಲ್ಲಿ ಲೀಗ್‌ನ ಮೇಲೆ ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ನ ಕರಿನೆರಳು ಬಿದ್ದಿತ್ತು.

ರಾಜಸ್ಥಾನ ತಂಡದ ಆಟಗಾರರಾದ ಎಸ್‌.ಶ್ರೀಶಾಂತ್‌, ಅಜಿತ್‌ ಚಾಂಡೀಲಾ ಮತ್ತು ಅಂಕಿತ್‌ ಚವ್ಹಾಣ್‌, ಫಿಕ್ಸಿಂಗ್‌ನಲ್ಲಿ ಭಾಗವಹಿಸಿದ್ದು ಸಾಬೀತಾಗಿತ್ತು. ಹೀಗಾಗಿ ಇವರನ್ನು ಅಮಾನತು ಮಾಡಲಾಗಿತ್ತು. ರಾಜಸ್ಥಾನ ಮತ್ತು ಚೆನ್ನೈ ತಂಡಗಳ ಮೇಲೆ 2015ರಲ್ಲಿ ಎರಡು ವರ್ಷಗಳ ಅಮಾನತು ಹೇರಲಾಗಿತ್ತು.

ಪ್ರತಿಕ್ರಿಯಿಸಿ (+)