ಬುಧವಾರ, ಡಿಸೆಂಬರ್ 11, 2019
16 °C

ಸ್ಥಗಿತಗೊಂಡ ಬಿಸಿಸಿಐ ವೆಬ್‌ಸೈಟ್

Published:
Updated:
ಸ್ಥಗಿತಗೊಂಡ ಬಿಸಿಸಿಐ ವೆಬ್‌ಸೈಟ್

ನವದೆಹಲಿ: ಪ್ರಪಂಚದ ಶ್ರೀಮಂತ ಕ್ರಿಕೆಟ್‌ ಮಂಡಳಿಯಾದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೆಬ್‌ಸೈಟ್‌ನ (www.bcci.tv) ಡೊಮೈನ್‌ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸದ ಕಾರಣ ಗೊಂದಲ ಸೃಷ್ಟಿಯಾಯಿತು.

ವೆಬ್‌ಸೈಟ್‌ನ ರಿಜಿಸ್ಟ್ರಾರ್‌ಗಳಾದ ರಿಜಿಸ್ಟರ್‌ ಡಾಟ್‌ ಕಾಮ್‌ ಮತ್ತು ನೇಮ್‌ಜೆಟ್‌ ಡಾಟ್ ಕಾಮ್‌ ಅನ್ನು ಸಾರ್ವಜನಿಕವಾಗಿ ಹರಾಜಿಗೆ ಇರಿಸಲಾಗಿದ್ದು ಏಳು ಬಿಡ್‌ಗಳು ಸಲ್ಲಿಕೆಯಾಗಿವೆ. 2019ರ ಫೆಬ್ರುವರಿ 2ರಂದು ಡೊಮೈನ್‌ನ ನವೀಕರಣ ಅವಧಿ ಮುಕ್ತಾಯಗೊಳ್ಳಲಿದೆ.

ಆದರೆ ಅಪ್‌ಡೇಟ್ ಮಾಡಲು ಭಾನುವಾರ ಕೊನೆಯ ದಿನವಾಗಿತ್ತು. ಆದ್ದರಿಂದ ಭಾನುವಾರ ವೆಬ್‌ಸೈಟ್ ಕೆಲಸ ಮಾಡುತ್ತಿರಲಿಲ್ಲ. ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ಕಾರಣ ಇದು ಭಾರಿ ಗೊಂದಲಕ್ಕೆ ಕಾರಣವಾಗಿತ್ತು.

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಹಾಗೂ ಬಿಸಿಸಿಐ ಆಯೋಜಿಸುವ ದೇಶಿ ಕ್ರಿಕೆಟ್ ಪಂದ್ಯಗಳ ತಕ್ಷಣದ ಮಾಹಿತಿ ಮತ್ತು ಸ್ಕೋರ್ ವಿವರ ಈ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಪ್ರತಿಕ್ರಿಯಿಸಿ (+)