ಮಂಗಳವಾರ, ಡಿಸೆಂಬರ್ 10, 2019
20 °C

ತಾಜ್‌ ಮಹಲ್ ಅತಿಶೀಘ್ರದಲ್ಲೇ ತೇಜೋಮಂದಿರ ಆಗಲಿದೆ : ವಿನಯ್ ಕಟಿಯಾರ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ತಾಜ್‌ ಮಹಲ್ ಅತಿಶೀಘ್ರದಲ್ಲೇ ತೇಜೋಮಂದಿರ ಆಗಲಿದೆ : ವಿನಯ್ ಕಟಿಯಾರ್

ನವದೆಹಲಿ: ಭಾರತದ ದೊಡ್ದ ಪ್ರವಾಸಿ ಕೇಂದ್ರವಾದ ತಾಜ್‌ಮಹಲ್ ಅತಿ ಶೀಘ್ರದಲ್ಲಿ ತೇಜೋ ಮಂದಿರ ಆಗಲಿದೆ ಎಂದು  ಬಿಜೆಪಿ ರಾಜ್ಯಸಭೆ ಸದಸ್ಯ ವಿನಯ್ ಕಟಿಯಾರ್ ಅವರು ಹೇಳಿದ್ದಾರೆ.

ಆಗ್ರಾದಲ್ಲಿ ಫೆ.18ರಿಂದ 10 ದಿನಗಳ ಕಾಲ ನಡೆಯುವ ತಾಜ್ ಮಹೋತ್ಸವದ ಬಗ್ಗೆ ಮಾತನಾಡುವಾಗ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.

‘ಆಗ್ರಾದಲ್ಲಿ ನಡೆಯುವ ಮಹೋತ್ಸವಕ್ಕೆ ತಾಜ್ ಮಹೋತ್ಸವ ಅಥವಾ ತೇಜೋ ಮಹೋತ್ಸವ ಎಂದು ಎರಡು ರೀತಿಯಿಂದಲೂ ಕರೆಯಬಹುದು. ತಾಜ್ ಮತ್ತು ತೇಜ್ ಪದಗಳ ಮಧ್ಯೆ ಸಾಕಷ್ಟು ವ್ಯತ್ಯಾಸ ಇಲ್ಲ. ಮೊಘಲ್ ದೊರೆ ಔರಂಗಜೇಬ್‌ನಿಂದಾಗಿ ನಮ್ಮ ತೇಜೋ ಮಂದಿರ ಸ್ಮಶಾನ ಭೂಮಿಯಾಯಿತು. ಹಾಗಾಗಿ ತಾಜ್ ಮಹಲ್ ಅನ್ನು ತೇಜೋ ಮಂದಿರವಾಗಿ ಪರಿವರ್ತಿಸಲಿದ್ದೇವೆ’ ಎಂದು ಹೇಳಿದ್ದಾರೆ.

‘ತಾಜ್‌ ಮಹಲ್ ಕೇವಲ ಔರಂಗಜೇಬ್‌ನ ಕಾಲಾವಧಿಯನ್ನು ಮಾತ್ರ ನೆನಪಿಸುವುದಿಲ್ಲ. ಇದು ನಮ್ಮ ದೇವಾಲಯ. ಇದರ ಹೆಸರಿನಲ್ಲಿ ಮಹೋತ್ಸವ ನಡೆಸುವುದು ಒಳ್ಳೆಯ ವಿಚಾರ’ ಎಂದಿದ್ದಾರೆ.

ಈ ಹಿಂದೆ ವಿನಯ್ ಕಟಿಯಾರ್ ಅವರು ತಾಜ್‌ ಮಹಲ್ ನಮ್ಮ ಶಿವ ದೇವಾಲಯ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ಪ್ರತಿಕ್ರಿಯಿಸಿ (+)