ನವದೆಹಲಿ: ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ನಟ ಅನುಪಮ್ ಖೇರ್ ಹೇಳಿದ್ದಾರೆ.

ಭಾರತದಲ್ಲಿರುವ ಕೆಲವು ಸ್ನೇಹಿತರು ಈ ಬಗ್ಗೆ ಮಾಹಿತಿ ನೀಡಿದರು. ಈ ಕುರಿತು ಟ್ವಿಟರ್ಗೆ ದೂರು ನೀಡಿದ್ದೇನೆ ಎಂದು ಸದ್ಯ ಲಾಸ್ ಏಂಜಲೀಸ್ನಲ್ಲಿರುವ ಅವರು ಹೇಳಿದ್ದಾರೆ.

‘ರಾಜ್ಯಸಭಾ ಸಂಸದರಾಗಿರುವ ಸ್ವಪನ್ ದಾಸ್ಗುಪ್ತಾ ಅವರಿಂದ ಮೊದಲ ಬಾರಿಗೆ ಸೋಮವಾರ ಟ್ವಿಟರ್ನಲ್ಲಿ ನನಗೊಂದು ಲಿಂಕ್ ಬಂತು. ಆದರೆ, ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿರುವ ಟರ್ಕಿಯ ಹ್ಯಾಕರ್ಗಳು ದಾಸ್ಗುಪ್ತಾ ಅವರ ಖಾತೆಯನ್ನೂ ಹ್ಯಾಕ್ ಮಾಡಿದ್ದಾರೆ ಎಂಬ ಸಂಗತಿ ಲಿಂಕ್ ತೆರೆದಾಗ ಗೊತ್ತಾಯಿತು’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಅನುಪಮ್ ಅವರ ಟ್ವಿಟರ್ ಖಾತೆ ತೆರೆದರೆ, ‘ಎಚ್ಚರಿಕೆ: ಈ ಖಾತೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ’ ಎಂದು ಕಾಣಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.