ಶುಕ್ರವಾರ, ಡಿಸೆಂಬರ್ 6, 2019
25 °C

"10 ರಂದು ರಾಹುಲ್ ಗಾಂಧಿ ಗೋ ಬ್ಯಾಕ್ ಚಳವಳಿ": ವರದಿ ಜಾರಿ ಹೋರಾಟ ಸಮಿತಿ

Published:
Updated:
"10 ರಂದು ರಾಹುಲ್ ಗಾಂಧಿ ಗೋ ಬ್ಯಾಕ್ ಚಳವಳಿ": ವರದಿ ಜಾರಿ ಹೋರಾಟ ಸಮಿತಿ

ಬಳ್ಳಾರಿ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಆಗ್ರಹಿಸಿ, ಫೆ.೧೦ ರಂದು ರಾಜ್ಯಕ್ಕೆ ಬರಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಡೆ ಒಡ್ಡಿ, ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ವರದಿ ಜಾರಿ ಹೋರಾಟ ಸಮಿತಿಯ ‌ಪ್ರಮುಖರಾದ ಮಾರಸಂದ್ರ ಮುನಿಯಪ್ಪ,  ಎನ್. ಮೂರ್ತಿ ತಿಳಿಸಿದರು.

೧೦ ರಂದು ರಾಹುಲ್ ಗಾಂಧಿ ಭೇಟಿ‌ ನೀಡಲಿರುವ ಎಲ್ಲ ಕಾರ್ಯಕ್ರಮಗಳಲ್ಲೂ ಪ್ರತಿಭಟಿಸಲಾಗುವುದು. ಅಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆಯೂ ಪ್ರತಿಭಟಿಸಲಾಗುವುದು ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಟಿ ಯಲ್ಲಿ ತಿಳಿಸಿದರು.

ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸು ಮಾಡದಿದ್ದರೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)