ಸೋಮವಾರ, ಡಿಸೆಂಬರ್ 9, 2019
22 °C

ನಾಳೆ ಚೌಡೇಶ್ವರಿ ತೇರು

Published:
Updated:
ನಾಳೆ ಚೌಡೇಶ್ವರಿ ತೇರು

ಟ್ಟಿಗೆರೆ ಸಮೀಪದ ವೀವರ್ಸ್‌ ಕಾಲೊನಿಯಲ್ಲಿ ಶುಕ್ರವಾರ (ಫೆ.9) ಚೌಡೇಶ್ವರಿ ದೇವಿಯ ದೇವಿಯ ಬ್ರಹ್ಮರಥೋತ್ಸವ, ಕರಗ, 20 ದೇವರುಗಳ ಮುತ್ತಿನಪಲ್ಲಕ್ಕಿ, ಬೆಳ್ಳಿಪಲ್ಲಕ್ಕಿ, ಹೂವಿನಪಲ್ಲಕ್ಕಿ ಉತ್ಸವ ನಡೆಯಲಿದೆ. ವಿವಿಧ ಜಾನಪದ ತಂಡಗಳಿಂದ ಕಲಾ ಪ್ರದರ್ಶನ, ಗ್ರಾಮೀಣ ಸಂಸ್ಕೃತಿ ಉತ್ಸವವನ್ನೂ ಆಯೋಜಿಸಲಾಗಿದೆ.

ಗುರುವಾರ (ಫೆ.8) ಮುಂಜಾನೆ ಗಣಪತಿ ಮತ್ತು ನವಗ್ರಹ ಹೋಮ, ವಿಶೇಷ ಪೂಜೆ, ಶಿಖರ ಕಳಸ ಪ್ರತಿಷ್ಠಾಪನೆ, ಹೋಮ, ರಥಶುದ್ಧಿ, ಸಂಜೆ 5 ಗಂಟೆಗೆ ಭಕ್ತಾದಿಗಳು ವಿವಿಧ ಬಗೆಯ ಕಾಷ್ಠಗಳನ್ನು ಅಗ್ನಿಕೊಂಡಕ್ಕೆ ತಂದು ಹಾಕಿ ಎಳವಾರ ಪೂಜೆ ಸಲ್ಲಿಸುವರು.

ಶುಕ್ರವಾರ ಮುಂಜಾನೆ ಶಕ್ತಿಹೋಮ, ದೇವತಾಶಕ್ತಿ ಹೋಮ, ಮಹಾಮಂಗಳಾರತಿ, 108 ಕಲಶಾಭಿಷೇಕ, ನಂತರ 9 ಘಂಟೆಗೆ ಅಗ್ನಿಕೊಂಡ ಉತ್ಸವ ನಡೆಯಲಿದೆ. ಮಧ್ಯಾಹ್ನ 12 ಘಂಟೆಗೆ ಶ್ರೀ ಚೌಡೇಶ್ವರಿ ದೇವಿಯ ಬ್ರಹ್ಮರಥೋತ್ಸವ, ಅನ್ನಸಂತರ್ಪಣೆ, ನಡೆಯಲಿದೆ.

ರಾತ್ರಿ 9 ಘಂಟೆಗೆ ಏಕಕಾಲಕ್ಕೆ ಚೌಡೇಶ್ವರಿ, ಶನಿಮಹಾತ್ಮ, ನವಶಕ್ತಿ ವಿನಾಯಕ, ಸವದತ್ತಿ ಯಲ್ಲಮ್ಮ ದೇವಿ, ಆಂಜನೇಯಸ್ವಾಮಿ, ತಿಮ್ಮರಾಯದೇವಿ, ರೇಣುಕಾಯಲ್ಲಮ್ಮ ದೇವಿ, ಸವದತ್ತಿಯಲ್ಲಮ್ಮ, ಬನಶಂಕರಿ ದೇವಿಯ ಹೂವಿನ, ಮುತ್ತಿನ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಲಿದೆ. 9.30ಕ್ಕೆ ಚೌಡೇಶ್ವರಿ ಅಮ್ಮನವರ ಕರಗ ಉತ್ಸವ ನಡೆಯಲಿದ್ದು ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಅಗ್ನಿಕೊಂಡ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದಲ್ಲಿ ವಿವಿಧ ದೇವರುಗಳ ಮೆರವಣಿಗೆ, ಪೂಜಾಕುಣಿತ, ಪಟ್ಟದ ಕುಣಿತ, ತಂಬಿಟ್ಟು ಮತ್ತು ಹೂವಿನ ಆರತಿಯೊಂದಿಗೆ ನೂರಾರು ಮಹಿಳೆಯರು ಸರತಿ ಸಾಲಿನಲ್ಲಿ ಬಂದು ದೇವರಿಗೆ ಪೂಜೆ ಸಲ್ಲಿಸುವರು.

ದೇವಾಲಯದ ಪ್ರಧಾನ ಅರ್ಚಕರು ಕೊಂಡ ಹಾಯುವರು. ನಂತರ ಭಕ್ತಾದಿಗಳು ಕೊಂಡಕ್ಕೆ ಉಪ್ಪು, ಹರಳೆಕಾಯಿ ಹಾಕಿ ಹರಕೆ ತೀರಿಸುವರು. ಶನಿವಾರ ಚೌಡೇಶ್ವರಿ ಅಮ್ಮನವರಿಗೆ ಮಡಿಲಕ್ಕಿ ಸೇವೆ ನಡೆಯಲ್ಲಿದ್ದು, ಹೆಣ್ಣುಮಕ್ಕಳು ಆರತಿ ಬೆಳಗುವರು.

ಪ್ರತಿಕ್ರಿಯಿಸಿ (+)